ಕಾಗವಾಡ: ತಾಲೂಕಿನ ಸೇಡುಬಾಳ ಗ್ರಾಮದ ಹೊರವಲಯದಲ್ಲಿ ಕರ್ನಾಟಕ ವಾಯುವ್ಯ ಸಾರಿಗೆ ಬಸ್ ಪಲ್ಟಿಯಾಗಿದ್ದು ಭಾರಿ ಅನಾಹುತ ತಪ್ಪಿದೆ.
ವಿಜಯಪುರದಿಂದ ಅಥಣಿ ಮಾರ್ಗವಾಗಿ ಮಹಾರಾಷ್ಟ್ರ ದ ಮೀರಜ್ ಕಡೆಗೆ ಸಾಗುತ್ತಿದ್ದ ಬಸ್ ಕಬ್ಬು ತುಂಬಿದ ಟ್ಯಾಕ್ಟರ್ ಓರ್ ಟೇಕ್ ಮಾಡಲು ಹೋಗಿ ರಸ್ತೆ ಬದಿಯಿದ್ದ ತಗ್ಗಿಗೆ ನುಗ್ಗಿದ ಬಸ್ ಪಲ್ಟಿಯಾಗಿದೆ ಬಸ್ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಗಂಭೀರ ಗಾಯಗೊಂಡಿದ್ದಾನೆ.
ಗಾಯಾಳುಗಳನ್ನ ಕಾಗವಾಡ ಸರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು ಸ್ಥಳಕ್ಕೆ ಕಾಗವಾಡ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ.