ವಿಜಯಪುರ : ನಕ್ಸಲರು ಶಸ್ತ್ರಾಸ್ತ್ರಗಳನ್ನು ಮುಂದಿಟ್ಟು ಬಳಿಕ ಶರಣಾಗತಿ ಆಗಬೇಕಿತ್ತು. ಸಿದ್ದರಾಮಯ್ಯ ಅವರೇ ನಕ್ಸಲರಿಗೆ ಶರಣಾಗಿದ್ದಾರೆ.ಸಿದ್ದರಾಮಯ್ಯ ನವರು ನಕ್ಸಲರಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದು ತಪ್ಪು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಇಂದು ಶರಣರಾಗಿ ನಾಳೆ ವೆಪನ್ಸ್ ತಂದು ಕೊಡಿ ಅಂತಾರೆ. ಮುಂದಿನ ದಿನಗಳಲ್ಲಿ ಇದೊಂದು ಸ್ಟೈಲ್ ಆಗುತ್ತೆ. ಕೆಲ ದಿನ ಬಂದೂಕು ಹಾಕಿಕೊಂಡು ಓಡಾಡುತ್ತಾರೆ. ನಾಲ್ಕಾರು ಕೊಲೆ ಮಾಡುತ್ತಾರೆ. ನಂತರ 6 ತಿಂಗಳು ಮಾಯವಾಗುತ್ತಾರೆ. ನಂತರ ಶರಣಾಗುತ್ತಾರೆ ಅವರಿಗೆ ವಿಶೇಷ ಪ್ಯಾಕೇಜ್ ಕೊಡುತ್ತಿರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಎಷ್ಟೋ ಪೊಲೀಸ್ ಅಧಿಕಾರಿಗಳು, ರೈತರು ಪ್ರಾಣ ಕಳೆದುಕೊಂಡಿದ್ದಾರೆ. ನಕ್ಸಲರಿಗೆ ಏನು ಕೊಡಬೇಕೆಂದು ಕೋರ್ಟ್ ತೀರ್ಮಾನ ಮಾಡುತ್ತದೆ. ನಕ್ಸಲರಿಂದ ಹತ್ಯೆಯಾದ ಪೊಲೀಸರು, ನಾಗರಿಕರ ಕುಟುಂಬಕ್ಕೆ ಏನು ಕೊಟ್ರು ? ಮುಖ್ಯವಾಹಿನಿಗೆ ಬರಬೇಕು ಅಂದರೆ ಕಾನೂನು ಪ್ರಕಾರ ಆಗಬೇಕು ಎಂದು ಹೇಳಿದ್ದಾರೆ.