ಕೊಪ್ಪಳ : ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪ್ರಭಾಕರ್ ಚಿಣಿಯವರನ್ನ ಕಣಕ್ಕೆ ಇಳಿಸಬೇಕು ಅನ್ನೋ ಕೂಗು ಕ್ಷೇತ್ರ ವ್ಯಾಪಿ ಕೇಳಿಸುತ್ತಿದೆ. ಇದೀಗ ಚಿಣಿ ಪರವಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಬಸವರಾಜ್ ಹಳ್ಳೂರ ಬ್ಯಾಟ್ ಬೀಸಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರರವರಿಗೆ ಪತ್ರ ಮುಖೇನ 2024ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕೊಪ್ಪಳ ಮತ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಅವಕಾಶ ಮಾಡಿಕೊಡಬೇಕು ಅಂತ ಕೋರಿದ್ದಾರೆ.
2024ರ ಲೋಕಾಸಭಾ ಚುನಾವಣೆಯಲ್ಲಿ ಕೊಪ್ಪಳ ಟಿಕೇಟ್ ಆಕಾಂಕ್ಷಿಯಾಗಿರುವ ಪ್ರಭಾಕರ್ ಚಿಣಿ ನಿವೃತ್ತಿ ಇಂಜಿನಿಯರ್ ಆಗಿದ್ದು, ಕರ್ನಾಟಕ ಸರ್ಕಾರದ ಸೇವೆಯಲ್ಲಿ ಆಡಳಿತದ ಅನುಭವ ಮತ್ತು ತಾಂತ್ರಿಕ ಜ್ಞಾನದ ಅನುಭವ ಇರುವುದರಿಂದ ಕೊಪ್ಪಳ ಮತಕ್ಷೇತ್ರ ಅಭಿವೃದ್ದಿ ಪಡಿಸಲು ಚಿಣಿ ಸೂಕ್ತ ಕ್ಯಾಂಡಿಡೇಟ್ ಆಗಿದ್ದಾರೆ. ಕೊಪ್ಪಳ ಜಿಲ್ಲೆ ತುಂಬಾ ಗುರುತಿಸಿಕೊಂಡಿರುವ ಪ್ರಭಾಕರ್ ಚಿಣಿ, ಕಾರ್ಯಕರ್ತರ ಪಡೆ ಕಟ್ಟಿಕೊಂಡು ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ.
ಇನ್ನು 2023ರ ವಿಧಾನಸಭೆ ಚುನಾವಣೆ ವೇಳೆ ಕುಷ್ಟಗಿ ಕ್ಷೇತ್ರದಿಂದ ದೊಡ್ಡನಗೌಡ ಪಾಟೀಲ್ ಗೆಲುವಿನ ಹಿಂದೆಯೂ ಇವರ ಶ್ರಮ ಸಾಕಷ್ಟಿದೆ. ಇನ್ನು ಜಾತಿಯಿಂದ ಉಪ್ಪಾರ ಜನಾಂಗಕ್ಕೆ ಸೇರಿದ್ದು, ಪ್ರಭಾಕರ್ ಚಿಣಿಯವರಿಗೆ ಅವಕಾಶ ಮಾಡಿಕೊಟ್ಟರೆ ಚುನಾಯಿತರಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ, ಹೀಗಾಗಿ ಪ್ರಭಾಕರ್ ಚಿಣಿಯವರಿಗೆ ಪಕ್ಷ ಟಿಕೇಟ್ ಕೊಡಬೇಕು ಎಂದು ಮನವಿ ಮಾಡಿದ್ದಾರೆ.