Wednesday, December 10, 2025
26.8 C
Bengaluru
Google search engine
LIVE
ಮನೆಜಿಲ್ಲೆಚಿನ್ನಾಭರಣವಿದ್ದ ಬ್ಯಾಗ್​​​​​ ದೋಚಿದ್ದ ಗ್ಯಾಂಗ್​​​​​​ ಮಧ್ಯಪ್ರದೇಶದಲ್ಲಿ ಬಂಧನ

ಚಿನ್ನಾಭರಣವಿದ್ದ ಬ್ಯಾಗ್​​​​​ ದೋಚಿದ್ದ ಗ್ಯಾಂಗ್​​​​​​ ಮಧ್ಯಪ್ರದೇಶದಲ್ಲಿ ಬಂಧನ

ದಾವಣಗೆರೆ : ಮದುವೆ ಸಮಾರಂಭದಲ್ಲಿ ಬಾಲಕಿ ನೃತ್ಯ ಮಾಡುತ್ತಿದ್ದವೇಳೆ ಚಿನ್ನಾಭರಣವಿದ್ದ ಬ್ಯಾಗ್​​​​​ ದೋಚಿದ್ದ ಕುಖ್ಯಾತ ಬ್ಯಾಂಡ್​​ ಬಜಾ ಗ್ಯಾಂಗ್​​​ನ ರಾಬರಿ ಪ್ರಕರಣವನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ..

ಪ್ರತಿಷ್ಠಿತ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ಜನರ ಗಮನ ಬೇರೆಡೆ ಸೆಳೆದು ಕೈಚಳಕ ತೋರುತ್ತಿದ್ದ ಮಧ್ಯಪ್ರದೇಶದ ಕುಖ್ಯಾತ ಗ್ಯಾಂಗ್​​​ನಿಂದ 51. 49 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿದ್ದು, ದಾಳಿ ವೇಳೆ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ..

ಪ್ರತಿಷ್ಠಿತರ ಮದುವೆ ಸಮಾರಂಭಗಳಲ್ಲಿ ನೆರೆದಿದ್ದವರ ಗಮನ ಬೇರೆಡೆ ಸೆಳೆದು ಈ ಗ್ಯಾಂಗ್​​ ಕಳ್ಳತನ ಮಾಡುತ್ತಿದ್ದು, ನ.14ರಂದು ಅಪೂರ್ವ ರೆಸಾರ್ಟ್​ನಲ್ಲಿಯೂ ಆರೋಪಿಗಳು ಕೈಚಳಕ ತೋರಿದ್ದರು. ಮದುವೆ ಸಮಾರಂಭದಲ್ಲಿ ಬಾಲಕಿ ನೃತ್ಯ ಮಾಡುತ್ತಿದ್ದ ವೇಳೆ ಚಿನ್ನಾಭರಣವಿದ್ದ ಬ್ಯಾಗ್ ಕೆಳಗಿಟ್ಟು ಚಪ್ಪಾಳೆ ತಟ್ಟುವಷ್ಟರಲ್ಲಿ ಅದನ್ನು ಗ್ಯಾಂಗ್​​ ಎಸ್ಕೇಪ್​​ ಮಾಡಿತ್ತು. 535 ಗ್ರಾಂ ಆಭರಣವಿದ್ದ ಬ್ಯಾಗ್​​ನ ಬ್ಯಾಂಡ್ ಬಜಾ ಗ್ಯಾಂಗ್ ಸದಸ್ಯರಾದ ಕರಣ್ ವರ್ಮಾ, ವಿನಿತ್ ಸಿಸೋಡಿಯಾ ಕದ್ದು ಪರಾರಿಯಾಗಿದ್ದರು.

ನ.14ರಂದು 200 ಗ್ರಾಂ ಚಿನ್ನದ ಡಾಬು, 50 ಗ್ರಾಂ ಅವಲಕ್ಕಿ ಸರ, 60 ಗ್ರಾಂ ಲಾಂಗ್ ಚೈನ್, ತಲಾ 20 ಗ್ರಾಂ ತೂಕದ 4 ನೆಕ್​ಲೆಸ್, 30 ಗ್ರಾಂ ತೂಕದ 2 ಸರ ಸೇರಿ 16 ಆಭರಣವಿದ್ದ ಬ್ಯಾಗ್​​ನ ಗ್ಯಾಂಗ್​​ ಎಗರಿಸಿತ್ತು. ಕಳುವಾಗಿದ್ದ ಬ್ಯಾಗ್​ನಲ್ಲಿದ್ದಚಿನ್ನಾಭರಣಗಳ ಪೈಕಿ ಬಹುತೇಕ ಆಭರಣಗಣ್ನು ಈಗ ಜಪ್ತಿ ಮಾಡಲಾಗಿದೆ. ಆರೋಪಿಗಳಾದ ಕರಣ್ ವರ್ಮಾ, ವಿನಿತ್ ಸಿಸೋಡಿಯಾಗಾಗಿ ಶೋಧ ಮುಂದುವರಿದಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಮಧ್ಯಪ್ರದೇಶದ ಪರೋರಿನಗರಕ್ಕೆ ತೆರಳಿದ್ದ ದಾವಣಗೆರೆ ಪೊಲೀಸರು ವೇಷ ಬದಲಿಸಿ ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. ಆರೋಪಿಗಳು ಮಧ್ಯವರ್ತಿಗೆ ಚಿನ್ನಾಭರಣವಿದ್ದ ಬ್ಯಾಗ್ ಬಗ್ಗೆ ಮಾಹಿತಿ ನೀಡಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments