ತುಮಕೂರು: ತುಮಕೂರಿನ ಅಭಿವೃದ್ಧಿ ಕುರಿತು ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ತುಮಕೂರಿಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ಬಂದಿರುವ ಡಿಸಿಗೆ ಅನುಭವವಿದೆ. ಹಿಂದೆ ಜಿಲ್ಲಾ ಪಂಚಾಯ್ತಿ ಸಿಇಒ ಆಗಿದ್ದರು, ಯಾವುದೇ ತೊಂದರೆ ಆಗಲ್ಲ ಅಭಿವೃದ್ದಿ ಕೆಲಸ ಮುಂದುವರೆಸುತ್ತೇವೆ ಎಂದರು. ಸರ್ಕಾರ ಚಿಂತನೆ ಏನಿದೆ ಅದರ ಅಡಿಯಲ್ಲಿ ನಾವು ಹೋಗುತ್ತೇವೆ. ತುಮಕೂರು ಬಹಳ ವೇಗವಾಗಿ ಬೆಳೆಯುತ್ತಿದೆ. ಡಿಸಿ- ಕಮಿಷನರ್ ಗೆ ವಿಸ್ತರಿಸಲು ಯೋಜನೆ ತಯಾರಿಸುವಂತೆ ಹೇಳಿದ್ದೇವೆ. ಈಗ ಭೀಮಸಂದ್ರದವರೆಗೂ ವಾರ್ಡ್ ವ್ಯಾಪ್ತಿಯಿದೆ, ಅದನ್ನು ಮಲ್ಲಸಂದ್ರವರೆಗೂ ವಿಸ್ತರಿಸುತ್ತೇವೆ. ತುಮಕೂರು ಸುತ್ತಮುತ್ತಲ ಹಳ್ಳಿಗಳನ್ನು ಸೇರಿಸಿಕೊಂಡು ವಿಸ್ತರಣೆ ಮಾಡಲಾಗುವುದು. ಬೆಂಗಳೂರಿನ ಮಾದರಿಯಲ್ಲಿ ತುಮಕೂರಿನ ವಾರ್ಡ್ ಗಳನ್ನು ಹೆಚ್ಚಿಸಲಾಗುವುದು ಎಂದು ಜಿ. ಪರಮೇಶ್ವರ್ ತಿಳಿಸಿದರು.
ಬರ ನಿರ್ವಹಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರಗಳಿಲ್ಲ, ಎಲ್ಲಾವನ್ನು ವಿವರಿಸಿದ್ದೇವೆ. ಈಗಾಗ್ಲೇ ಸದನದಲ್ಲಿ ಸಿಎಂ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಹಣ ಒಂದು ರೂಪಾಯಿ ಬಂದಿಲ್ಲ. ನೀವೇನು ಖರ್ಚು ಮಾಡಿದ್ದೀರಾ ಅಂತ ಹೇಳ್ತಿದ್ದಾರೆ. ಜಿಲ್ಲಾಧಿಕಾರಿಗಳ ಅಕೌಂಟ್ನಲ್ಲಿ ಸುಮಾರು 500 ಕೋಟಿ ಹಣ ಇಟ್ಟಿದ್ದೇವೆ ಎಂದರು. ನಮ್ಮ ಜಿಲ್ಲೆಯ ಡಿಸಿ ಅಕೌಂಟ್ ನಲ್ಲಿ 30 ಕೋಟಿ ರೂಪಾಯಿ ಹಣ ವಿದೆ. ಏಮರ್ಜೆನ್ಸಿ ಇದ್ರೆ ಜನರಿಗೆ ತೊಂದರೆ ಆದ್ರೆ ಖರ್ಚು ಮಾಡಿ ಅಂತ ಹಣವಿಟ್ಟಿದ್ದೇವೆ. ರಾಜಕೀಯ ಕಾರಣಕ್ಕಾಗಿ ಇಲ್ಲ ಸಲ್ಲದ ಅಪಾಧನೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರವಾಗಿ ಮಾತನಾಡಿದ್ದು, ಸರ್ಕಾರದಲ್ಲಿ ಚರ್ಚೆ ಆಗಿಲ್ಲ, ಅವರವ್ರೆ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದಲ್ಲಿ ನಾಲ್ಕು ಏರ್ಪೋಟ್ ಗಳಿಗೆ ಹೆಸರಿಡಲು ಸದನದಲ್ಲಿ ಅಪ್ರೂವ್ ಮಾಡಿದ್ದೇವೆ. ಅದು ಸದನಕ್ಕೆ ಬರಬೇಕು. ಅಂತಹ ಪ್ರಪೋಸಲ್ ಇದ್ದರೆ,ಅದನ್ನು ಸದನಕ್ಕೆ ತರುತ್ತೇವೆ. ತಪ್ಪು ಸರಿ ಬೇರೆ, ಅಸೆಂಬ್ಲಿಯಲ್ಲಿ ಬಿಲ್ಲಿನ ರೂಪದಲ್ಲಿ ತರುತ್ತೇವೆ. ನಾನು ಒಂದು ಹೇಳ್ತಿನಿ, ಇನ್ನೊಬ್ಬರು ಇನ್ನೊಂದು ಹೇಳ್ತಾರೆ. ಅಸೆಂಬ್ಲಿಯಲ್ಲಿ ಪಾಸಾಗಬೇಕು, ಅಲ್ಲಿ ವಿರೋಧ ಪರಮಾತನಾಡಬೇಕು ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.