Wednesday, January 28, 2026
24.9 C
Bengaluru
Google search engine
LIVE
ಮನೆ#Exclusive NewsTop Newsವರಮಹಾಲಕ್ಷ್ಮೀ ಹಬ್ಬದಲ್ಲಿ ಗ್ರಾಹಕರಿಗೆ ಶಾಕ್ ನೀಡಿದ- ಹೂ, ಹಣ್ಣು ಬೆಲೆ ಏರಿಕೆ

ವರಮಹಾಲಕ್ಷ್ಮೀ ಹಬ್ಬದಲ್ಲಿ ಗ್ರಾಹಕರಿಗೆ ಶಾಕ್ ನೀಡಿದ- ಹೂ, ಹಣ್ಣು ಬೆಲೆ ಏರಿಕೆ

ಬೆಂಗಳೂರು: ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ನಮಗೆ ಎದುರಾಗುತ್ತವೆ. ತಿಂಗಳ ಆರಂಭದಿಂದಲೇ ಶುರುವಾಗುವ ತಯಾರಿ ಶ್ರಾವಣ ಮುಗಿಯುವವರೆಗೂ ನಿಲ್ಲುವುದಿಲ್ಲ. ಪ್ರತಿ ಶುಕ್ರವಾರ ಮನೆಯಲ್ಲಿ ವಿಜೃಂಭಿಸುವ ಲಕ್ಷ್ಮೀ ಪೂಜೆಯ ಸಿದ್ಧತೆಯಂತೂ ಸಂಭ್ರಮದಿಂದ ಕೂಡಿರುತ್ತದೆ.

ನಾಳೆ ಶಾವ್ರಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಹಿಂದಿನ ದಿನ ಮಾರುಕಟ್ಟೆಗೆ ಇಳಿಯುವ ಜನರು ಹೂವು ಹಣ್ಣಿನ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಹೂವು ಹಣ್ಣುಗಳಿಲ್ಲದೇ ಹಬ್ಬ ಮಾಡುವುದು ಅಸಾಧ್ಯ. ಹೀಗಾಗಿ ದರ ಹೆಚ್ಚಿದ್ದರೂ ಜನರಿಗೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ. ಸಾಮಾನ್ಯ ದಿನ ಮಾರಾಟವಾಗುವ ದರಕ್ಕಿಂತ ಹೂವು ಹಣ್ಣಿನ ದರ ದುಪ್ಪಟ್ಟಾಗಿದೆ. ಹಾಗಾದರೆ ಯಾವುದರ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹೂವಿನ ಬೆಲೆ ಎಷ್ಟಿದೆ?
ಮಲ್ಲಿಗೆ ಕೆಜಿಗೆ 1,600 ರೂಪಾಯಿ, ಸೇವಂತಿ 80-300 ರೂ., ಗುಲಾಬಿ 200-250 ರೂ., ಚೆಂಡು ಹೂವು 50-80 ರೂ., ಸುಗಂಧರಾಜ 300 ರೂ., ಕನಕಾಂಬರ 2,000 ರೂ., ಸೇವಂತಿಗೆ ಮಾರು 80-200 ರೂ., ಮಲ್ಲಿಗೆ ಹಾರ 1,500-2,000 ರೂ. ಹಾಗೂ ಬಾಳೆಕಂದು ಜೋಡಿ 100-150 ರೂ. ಇದೆ.

ಯಾವ ಹಣ್ಣಿಗೆ ಎಷ್ಟು ಬೆಲೆ?
ಮಿಕ್ಸ್ ಹಣ್ಣು ಕೆಜಿಗೆ 450 ರೂಪಾಯಿ, ಸೇಬು 300 ರೂ., ದಾಳಿಂಬೆ 250 ರೂ., ಅನಾನಸ್ 150-200 ರೂ. ಇದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments