ಯಾದಗಿರಿ: ನನ್ನ ಮಿತ್ರ ವೆಂಕಟಪ್ಪ ನಾಯಕ ಕ್ಷೇತ್ರ ಮಾತ್ರವಲ್ಲ ಜಿಲ್ಲೆಯಲ್ಲೇ ದೊಡ್ಡ ಜನನಾಯಕ. ನೀವೆಲ್ಲರೂ ಅವರನ್ನು ಬೆಳೆಸಿದ್ದೀರಿ. ಅವರು ರಾಜಮನೆತನದಿಂದ ಬಂದಿದ್ದರು ಬಹಳ ಸರಳತೆ ಹೊಂದಿದ್ದರು. ನನ್ನ ಮಿತ್ರ ರಾಜಪ್ಪ ವೆಂಕಟಪ್ಪ ನಾಯಕನ ಕೊನೆ ಬಾರಿಗೆ ಆಸ್ಪತ್ರೆಯಲ್ಲಿ ಭೇಟಿ ಮಾಡಿದಾಗ ಅವರಿಗೆ ಮಾತನಾಡಲು ಶಕ್ತಿ ಇಲ್ಲದಿದ್ದರೂ ನಾನು ಬಂದು ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕುತ್ತೇನೆ ಎಂದು ಕಾಗದದ ಮೇಲೆ ಬರೆದು ತೋರಿಸಿದ್ದರು.
ದುರಾದೃಷ್ಟವಶಾತ್ ಎರಡೇ ದಿನಗಳಲ್ಲಿ ಅವರು ವಿಧಿವಶರಾದರು. ನೀವೆಲ್ಲರೂ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಿ ನೀವು 5 ವರ್ಷಗಳ ಕಾಲ ಅಧಿಕಾರ ನಡೆಸಿ ಎಂದು ಆರಿಸಿ ಕಳಿಸಿದ್ದೀರಿ. ಅವರ ವಿರುದ್ಧ ಸ್ಪರ್ಧೆ ಮಾಡಿದವರು ಕ್ರಿಕೆಟ್ ಹಾಗೂ ಕಬಡ್ಡಿ ನಾಯಕ. ಪಾಲಿಕೆ ಸಮಿತಿ ಚುನಾವಣೆಯಲ್ಲಿ ಅವರ ಪಕ್ಷದಿಂದ 17 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈತ ಬೆಂಗಳೂರಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅವರಿಗೆ ಕಾರ್ಯಕರ್ತರ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 2 ವರ್ಷಗಳ ಕಾಲ ನನ್ನ ಮನೆ ಬಾಗಿಲಿಗೆ ಯಾರೂ ಬರಬೇಡಿ ಎಂದು ಮಾಜಿ ಶಾಸಕರು ಕಾರ್ಯಕರ್ತರಿಗೆ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ಓದಿದ್ದೆ. ಈಗ ಅವರು ಯಾಕೆ ಜನರ ಮುಂದೆ ಬರುತ್ತಿದ್ದಾರೆ ಎಂದು ನೀವೆಲ್ಲ ಅವರನ್ನು ಕೇಳಬೇಕು.
ಮಲ್ಲಿಕಾರ್ಜುನ ಖರ್ಗೆ ಅವರು ನಾವು ನುಡಿದಂತೆ ನಡೆಯುತ್ತೇವೆ, ಬಿಜೆಪಿ ನುಡಿದಂತೆ ನಡೆಯಲ್ಲ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸ ಎಂದರು. ಕಳೆದ ಚುನಾವಣೆ ಸಮಯದಲ್ಲಿ ಮೋದಿ ಅವರು ವಿದೇಶದಿಂದ ಕಪ್ಪುಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ನಿಮ್ಮಲ್ಲಿ ಯಾರಿಗಾದರೂ 15 ಲಕ್ಷ ಹಣ ಬಂತಾ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ನಿಮ್ಮಲ್ಲಿ ರೈತರ ಆದಾಯ ಡಬಲ್ ಆಯಿತಾ?
ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಶಕ್ತಿ ಯೋಜನೆ ಜಾರಿ ತರಲು ಈ ಜಿಲ್ಲೆಯ ಜನ ಕಾರಣ. ಕೋವಿಡ್ ಸಮಯದಲ್ಲಿ ಈ ಭಾಗದ ಕೂಲಿ ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ಮರಳುವಾಗ ಬಿಜೆಪಿ ಸರ್ಕಾರ ಅವರಿಂದ ಮೂರುಪಟ್ಟು ಹಣ ವಸೂಲಿ ಮಾಡಲು ಮುಂದಾಯಿತು. ನಿಮ್ಮ ಜಿಲ್ಲೆಯ ಜನರು ಖರ್ಗೆ ಅವರ ಮನೆಗೆ ಹೋಗುತ್ತಾ ದಾರಿಯಲ್ಲಿ ನನ್ನ ಮನೆಗೂ ಬಂದು ತಮ್ಮ ಅಳಲು ಹೇಳಿಕೊಂಡರು. ಆಗ ನಾನು ನಮ್ಮ ನಾಯಕರ ಜತೆ ಚರ್ಚೆ ಮಾಡಿ ನಮ್ಮ ಪಕ್ಷದಿಂದ 1 ಕೋಟಿ ಮೊತ್ತದ ಚೆಕ್ ಗೆ ಸಹಿ ಮಾಡಿ ಈ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದೆವು. ಅವರು ಚೆಕ್ ಪಡೆಯಲಿಲ್ಲ. ನಾವು ನಮ್ಮ ಹೋರಾಟ ಮಾಡಿದೆವು. ಪರಿಣಾಮ ಕೋವಿಡ್ ಸಮಯದಲ್ಲಿ ರಾಜ್ಯದೆಲ್ಲೆಡೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದರೆ ಅದು ಕಾಂಗ್ರೆಸ್ ಪಕ್ಷದ ಹೋರಾಟದ ಫಲ.
ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದೆಲ್ಲೆಡೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಶಕ್ತಿ ಯೋಜನೆ ಬಳಿಕ ದೇವಾಲಯಗಳ ಹುಂಡಿ ಭರ್ತಿಯಾಗುತ್ತಿದೆ. ದೇವಾಲಯಗಳ ಆದಾಯ ಹೆಚ್ಚುತ್ತಿದೆ. ಅದೇ ರೀತಿ ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ 5 ಕೆ.ಜಿ ಅಕ್ಕಿ, 5 ಕೆ.ಜಿ ಅಕ್ಕಿಯ ಮೊತ್ತವನ್ನು ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇಂತಹ ಯಾವುದಾದರೂ ಒಂದು ಯೋಜನೆಯನ್ನು ಬಿಜೆಪಿ ಡಬಲ್ ಇಂಜಿನ್ ಸರ್ಕಾರ ನೀಡಿತ್ತಾ? ಇಲ್ಲ. ಅವರದ್ದು ಕೇವಲ ಖಾಲಿ ಡಬ್ಬಾ.
ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯದ ಪಟ್ಟಿ ದೊಡ್ಡದಿದೆ. ಮಾಜಿ ಶಾಸಕರು ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿ ಎರಡು ಬೆಳೆಗೆ ಅವಕಾಶ ಕಲ್ಪಿಸುವುದಾಗಿ ಪ್ರಚಾರ ಮಾಡುತ್ತಿದ್ದಾರಂತೆ. ಅಧಿಕಾರದಲ್ಲಿರುವುದು ಯಾರಪ್ಪಾ? ಡಿ.ಕೆ. ಶಿವಕುಮಾರ್ ನೀರಾವರಿ ಸಚಿವ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ. ನಮಗೂ ಜನರಿಗೂ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧವಿದೆ. ರೈತರ ಕಷ್ಟ ನಮಗೆ ಗೊತ್ತಿದೆ. ನೀವು ರೈತರಿಗೆ ಸಹಾಯ ಮಾಡಿಲ್ಲ ಎಂಬ ಕಾರಣಕ್ಕೆ ಜನ ನಿಮ್ಮನ್ನು ಖಾಲಿ ಮಾಡಿಸಿ ನಮಗೆ 136 ಸೀಟು ಕೊಟ್ಟು ವಿಧಾನಸೌಧದಲ್ಲಿ ಕೂರಿಸಿದ್ದಾರೆ. ಅಧಿಕಾರ ಇದ್ದಾಗ ಏನೂ ಹರಿಯದೇ, ಅಧಿಕಾರ ಇಲ್ಲದಿದ್ದಾಗ ಹರಿಯುತ್ತೇನೆ ಎಂದರೆ ಜನ ನಂಬುತ್ತಾರಾ? ನೀವು ಇಲ್ಲಿ ನೀವು ಮತ ಹಾಕಿದರೆ ವಿಧಾನಸೌದ ಮಾತ್ರವಲ್ಲ ಲೋಕಸಭೆಗೂ ನಮ್ಮ ಅಭ್ಯರ್ಥಿ ಆಯ್ಕೆಯಾಗಬೇಕು.
ನಮ್ಮ ಇಬ್ಬರೂ ಅಭ್ಯರ್ಥಿಗಳು ವಿದ್ಯಾವಂತ, ಬುದ್ಧಿವಂತರ ಜೋಡಿ. ನೀವು ಅವರಿಬ್ಬರನ್ನು ಆರಿಸಬೇಕು. ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾವುದೇ ಕೆಲಸ ಮಾಡಿಲ್ಲ. ಬಿಜೆಪಿಯವರು ಮತ್ತೆ ಅವರಿಗೆ ಟಿಕೆಟ್ ನೀಡಲು ಹಿಂದೆ ಮುಂದೆ ನೋಡಿದ್ದಾರೆ. ಬಿಜೆಪಿ ನಾಯಕರ ಹಗರಣ ಹಾಗೂ ಸಿನಿಮಾವನ್ನು ನೀವು ಟಿವಿಯಲ್ಲಿ ನೋಡುತ್ತಿದ್ದೀರಲ್ಲಾ? ಅವರ ಸ್ನೇಹಿತರಿಗೆ ನೀವು ಮತ ನೀಡಬೇಕೇ? ಈ ಬಗ್ಗೆ ನೀವು ತೀರ್ಮಾನ ಮಾಡಿ ಮತ