
ಬೆಂಗಳೂರು: 2024 ನೆ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು, ರಾಜ್ಯದಲ್ಲಿ ನಾಳೆ ಮೊದಲನೇ ಹಂತದ ಮತದಾನ ಬೆಳಿಗ್ಗೆ 7 ಗಂಟೆಯಿಂದ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಹೋಟೆಲುಗಳ ಒಕ್ಕೂಟ ಸೇರಿದಂತೆ, ನಿಸರ್ಗ ಗ್ರ್ಯಾಂಡ್ ಹೋಟೆಲ್ ನ ಮಾಲೀಕರಾದ ಕೃಷ್ಣ ಮೂರ್ತಿ ಯವರು ಲೋಕಸಭಾ ಚುನಾವಣೆ ಯಲ್ಲಿ ವೋಟ್ ಮಾಡಿದಂತ ಗ್ರಾಹಕರಿಗೆ ಉಚಿತವಾಗಿ ದೋಸೆ, ತುಪ್ಪದ ಲಾಡು, ವಾಟರ್ ಮೆಲನ್ ಜ್ಯೂಸ್ ಗಳನ್ನ ನೀಡುವುದರ ಮುಖಾಂತರ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ನ ಮಾಲೀಕರಾದ ಕೃಷ್ಣ ಮೂರ್ತಿ ಯವರು 2018 ರಿಂದ ಈ ರೀತಿಯ ಜನ ಜಾಗೃತಿ ಕಾರ್ಯಕ್ರಮ ನಡೆಸುತ್ತ ಬರ್ತಿದ್ದು, ಈ ಬಾರಿಯೂ ಸಹ ವೋಟ್ ಮಾಡಿ ನಂತರ ಉಚಿತವಾಗಿ ಉಪಹಾರ ಮಾಡಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಮತದಾನ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದ್ದರಿಂದ, ಮತದಾನ ನಮ್ಮ ಹಕ್ಕು. ಎಂದು ತಿಳಿಸಿದ್ದು, ಅದನ್ನು ಉತ್ತೇಜನ ಮಾಡಲಿಕ್ಕಾಗಿ 2018 ರಿಂದ ಈ ರೀತಿ ಜನ ಜಾಗೃತಿ ಹಮ್ಮಿಕೊಂಡಿದ್ದಾರೆ.

ಈ ಬಾರಿಯೂ ಸಹ ಅಂದಾಜು 7000 ಜನರು ಬರುವ ನಿರೀಕ್ಷೆ ಇದ್ದು, ಬೆಳಿಗ್ಗೆ 6 ರಿಂದ ಸಂಜೆ 7 ರ ವರೆಗೂ ಯಾವುದೇ ಕ್ಷೇತ್ರದ ಮತದಾರರು ಸಹ ಈ ಉಚಿತ ಸೌಲಭ್ಯ ವನ್ನು ಪಡೆದುಕೊಳ್ಳಬಹುದು..




