ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರತಿ ಬಾರಿಯಂತೆ ಈ ಬಾರಿಯೂ ಗ್ರೀನ್ ಜೆರ್ಸಯಲ್ಲಿ ಕಣಕ್ಕಿಳಿಯಲಿದೆ. ಏಪ್ರಿಲ್ 23ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯಲಿದೆ. ಈ ಬಗ್ಗೆ ಆರ್‌ಸಿಬಿ ಖಚಿತಪಡಿಸಿದೆ.
ಗ್ರೀನ್ ಜೆರ್ಸಿಯಲ್ಲಿ ಆಟಗಾರರ ಪೋಟೋಶೂಟ್ ನಡೆಸಿದ್ದು, ಅದರ ಪೋಟೋಗಳನ್ನು ಆರ್‌ಸಿಬಿ ಹಂಚಿಕೊಂಡಿದೆ. ಗೆಲುವಿನ ಲಯಕ್ಕೆ ಮರಳುವ ಸಿದ್ಧತೆ ನಡೆಸಿರುವ ಆರ್ಸಿಬಿಗೆ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಗ್ರೀನ್ ಜರ್ಸಿಯಲ್ಲಿ ಆರ್‌ಸಿಬಿ ಗೆದ್ದ ಇತಿಹಾಸ ಇಲ್ಲ.
ಹೌದು. ಬೆಂಗಳೂರು ತಂಡದ ಪಾಲಿಗೆ ಈ ಹಸಿರು ಜರ್ಸಿ ಅನ್ಲೆಕ್ಕಿ ಎಂದೇ ಹೇಳಲಾಗುತ್ತದೆ. ಯಾಕಂದರೆ ಐಪಿಎಲ್‌ನಲ್ಲಿ ಆರ್‌ಸಿಬಿ ಗ್ರೀನ್ ಜರ್ಸಿಯಲ್ಲಿ ಆಡಿರುವ 11 ಪಂದ್ಯದಲ್ಲಿ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ 8 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯವು ಫಲಿತಾಂಶ ಇಲ್ಲದೆ ಅಂತ್ಯ ಕಂಡಿತ್ತು.
2018ರಲ್ಲಿ ರಾಜಸ್ಥಾನ್ ವಿರುದ್ಧ ಹಸಿರು ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಾಗ ಆರ್‌ಸಿಬಿ ಸೋಲನ್ನಪ್ಪಿತ್ತು. ಈ ಬಾರಿ ರಾಜಸ್ಥಾನ್ ವಿರುದ್ಧವೇ ಕಣಕ್ಕಿಳಿಯಲಿದೆ. ಹಸಿರು ಜರ್ಸಿಯಲ್ಲಿ ಆರ್‌ಸಿಬಿ 2011, 2012, 2013, 2014, 2017, 2018, 2019, 2020ರಲ್ಲಿ ಸೋಲು ಕಂಡಿದೆ. ಆದರೆ 2016, 2022ರಲ್ಲಿ ಗೆದ್ದಿದೆ. 2015ರಲ್ಲಿ ಫಲಿತಾಂಶ ಬಂದಿರಲಿಲ್ಲ.
ಈ ಹಸಿರು ಜೆರ್ಸಿ ಧರಿಸುವುದರ ಹಿಂದೆ ಮಹತ್ವದ ಉದ್ದೇಶವಿದೆ. ಪರಿಸರ ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆರ್‌ಸಿಬಿ ಈ ವಿಭಿನ್ನ ಹಾದಿಯಲ್ಲಿ ಸಾಗಿದೆ. ಅಲ್ಲದೆ ಈ ಜರ್ಸಿಯನ್ನು ಶೇ 100% ಮರು ಬಳಕೆಯ ವಸ್ತುಗಳಿಂದ ತಯಾರಿಸಲಾಗಿರುತ್ತದೆ.
ಆರ್‌ಸಿಬಿ 2011 ರಿಂದ ಹಸಿರು ಜೆರ್ಸಿಯನ್ನು ಧರಿಸುತ್ತಿದೆ. 2019ರ ನಂತರ ತವರು ಮೈದಾನದಲ್ಲಿ ಇದೇ ಮೊದಲ ಬಾರಿಗೆ ಈ ಜೆರ್ಸಿಯೊಂದಿಗೆ ಆಡುತ್ತಿದ್ದಾರೆ. 2020, 2021, 2022ರಲ್ಲಿ ಕೊರೊನಾ ಕಾರಣ RCB ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರಲಿಲ್ಲ
https://twitter.com/RCBTweets/status/1780954268998193187?ref_src=twsrc%5Etfw%7Ctwcamp%5Etweetembed%7Ctwterm%5E1780954268998193187%7Ctwgr%5Ec3ede8d25821d57f6f01cc90d2f3aefceaf041c9%7Ctwcon%5Es1_&ref_url=https%3A%2F%2Fvistaranews.com%2Fsports%2Frcb-vs-kkr-rcb-green-jersey-match-record-and-stats%2F635261.html