ದಾಳಿಂಬೆ ಮಕ್ಕಳಿಗೆ, ವೃದ್ಧರಿಗೆ ಮತ್ತು ರೋಗಿಗಳಿಗೆ ತುಂಬಾ ಒಳ್ಳೆಯದು. ಪ್ರತಿದಿನ ಒಂದು ಹಿಡಿ ಕೆಂಪು ದಾಳಿಂಬೆ ಬೀಜಗಳನ್ನ ತಿನ್ನುವುದು ರಕ್ತಹೀನತೆಯಿಂದ ದೌರ್ಬಲ್ಯದವರೆಗೆ ವಿವಿಧ ಕಾಯಿಲೆಗಳನ್ನ ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಆದ್ರೆ, ಎಲ್ಲರೂ ದಾಳಿಂಬೆ ತಿನ್ನಬಾರದು.
ರಕ್ತಹೀನತೆಯ ಸಮಸ್ಯೆಯನ್ನು ತಡೆಯುವಲ್ಲಿ ದಾಳಿಂಬೆ ತುಂಬಾ ಪರಿಣಾಮಕಾರಿ. ಆದರೆ ಈ ಸಮಸ್ಯೆಯ ಹೊರತಾಗಿಯೂ ಎಲ್ಲರೂ ಈ ಹಣ್ಣನ್ನ ತಿನ್ನಬಾರದು. ವಿಶೇಷವಾಗಿ ಈ ಕೆಳಗಿನ ಆರೋಗ್ಯ ಸಮಸ್ಯೆಗಳಿರುವವರು ದಾಳಿಂಬೆಯನ್ನ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳ ಬದಲಿಗೆ ಹಾನಿಯನ್ನು ಅನುಭವಿಸಬಹುದು.

ಆರೋಗ್ಯ ತಜ್ಞರ ಪ್ರಕಾರ, ಕಡಿಮೆ ರಕ್ತದೊತ್ತಡ ಇರುವವರು ದಾಳಿಂಬೆಯನ್ನ ತಿನ್ನಬಾರದು. ದಾಳಿಂಬೆ ಸಾಮಾನ್ಯವಾಗಿ ತಂಪಾದ ಹಣ್ಣು. ಕಡಿಮೆ ರಕ್ತದೊತ್ತಡ ಇರುವವರು ದಾಳಿಂಬೆ ತಿನ್ನುವ ಮೂಲಕ ರಕ್ತ ಪರಿಚಲನೆಯನ್ನ ನಿಧಾನಗೊಳಿಸಬಹುದು.
ಮಧುಮೇಹಿಗಳು ದಾಳಿಂಬೆಯನ್ನ ತಿನ್ನಬಾರದು. ದಾಳಿಂಬೆ ಒಂದು ಸಿಹಿ ಹಣ್ಣು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತದೆ. ಆದ್ದರಿಂದಲೇ ಮಧುಮೇಹಿಗಳು ದಾಳಿಂಬೆಯನ್ನು ಸೇವಿಸದಿರಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಅಲರ್ಜಿ ಸಮಸ್ಯೆಗಳಿರುವ ಜನರು ದಾಳಿಂಬೆ ಬೀಜಗಳಿಂದ ದೂರವಿರಲು ವೈದ್ಯರು ಸಲಹೆ ನೀಡುತ್ತಾರೆ. ಇಂತಹವರು ದಾಳಿಂಬೆ ತಿನ್ನುವುದರಿಂದ ಅಲರ್ಜಿ ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ರೆ, ಅದು ಎಲ್ಲರಿಗೂ ಅನ್ವಯಿಸುವುದಿಲ್ಲ.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com


