Thursday, January 29, 2026
20.3 C
Bengaluru
Google search engine
LIVE
ಮನೆರಾಜಕೀಯರೆಸಾರ್ಟ್​ನಲ್ಲಿ ಸಿಎಂ ಸಿದ್ದು ಮಾಸ್ಟರ್ ಪ್ಲಾನ್ ; BSY ಆಪ್ತರೇ ಟಾರ್ಗೆಟ್

ರೆಸಾರ್ಟ್​ನಲ್ಲಿ ಸಿಎಂ ಸಿದ್ದು ಮಾಸ್ಟರ್ ಪ್ಲಾನ್ ; BSY ಆಪ್ತರೇ ಟಾರ್ಗೆಟ್

ಮೈಸೂರು: ಮೈಸೂರು ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನುಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಮೂರು ದಿನಗಳ ಮೈಸೂರು ಪ್ರವಾಸದಲ್ಲಿದ್ದಾರೆ. ಮೈಸೂರಿನ ರೆಸಾರ್ಟ್​ನಲ್ಲಿ ಕುಳಿತುಕೊಂಡೇ ಸಿಎಂ ಆಪರೇಷನ್ ಹಸ್ತಕ್ಕೆ ಸಜ್ಜಾಗಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಬಿಎಸ್​ವೈ ಆಪ್ತರಾದ ಹೆಚ್. ವಿ ರಾಜೀವ್ ಹಾಗೂ ಮತ್ತೊಬ್ಬ ಆಪ್ತನಿಗೆ ಸಿಎಂ ಗಾಳ ಹಾಕ್ತಾ ಇದಾರೆ ಎನ್ನುವ ಗುಮಾನಿ ಇದೆ. ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದರನ್ನು ಪಕ್ಷಕ್ಕೆ ಸೆಳೆಯಲು ಸಿಎಂ ಪ್ಲಾನ್ ಮಾಡ್ತಾ ಇದಾರೆ ಎನ್ನಲಾಗ್ತಾ ಇದೆ. ಈ ಹಿಂದೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಪೋರ್ಟ್​ಗೆ ನಿಂತಿದ್ದ ಸದಾನಂದರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಿದ್ದರಾಮಯ್ಯ ಬಹುತೇಕ ಯಶಸ್ವಿಯಾಗಿದ್ದಾರೆ.

ಸದಾನಂದ ವೀರಶೈವ ಸಮುದಾಯದ ಮುಖಂಡರಾಗಿದ್ದು, ಅವರನ್ನು ಸೆಳೆಯುವ ಮೂಲಕ ವೀರಶೈವ ಮತಗಳ ಕ್ರೂಡೀಕರಣಕ್ಕೂ ಸಿದ್ದರಾಮಯ್ಯ ಸಖತ್ ಪ್ಲಾನ್ ಮಾಡ್ತಿದ್ದಾರೆ. ಇವರುಗಳ ಜೊತೆ ಮಾಜಿ ಮೇಯರ್ ಎಲ್ ಬೈರಪ್ಪ, ಪಾಲಿಕೆಯ ಕೆಲವು ಮಂದಿ ಮಾಜಿ ಸದಸ್ಯರು ಕೂಡ ಕೈ ಕಾಳಗಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ ಮೈಸೂರು-ಕೊಡಗು, ಹಾಗೂ ಚಾಮರಾಜನಗರ ಕ್ಷೇತ್ರವನ್ನು ಶತಾಯುಗತಾಯ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಸಿಎಂ ಸಿದ್ದು, ರೆಸಾರ್ಟ್​ನಲ್ಲೇ ಕುಳಿತು ಕ್ಷೇತ್ರದಲ್ಲಿ ಪ್ರಭಾವಿ ಮುಖಂಡರನ್ನ ಗುರುತಿಸಿ ಕಾಂಗ್ರೆಸ್​ಗೆ ಸೆಳೆಯುವಲ್ಲಿ ಬಾರೀ ತಂತ್ರ ರೂಪಿಸುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments