ಬೆಂಗಳೂರು: ಕಾಟೇರ ಸಿನಿಮಾ 200 ಕೋಟಿಗೂ ಅಧಿಕ ಮೊತ್ತ ಗಳಿಸಿದ ಹಿನ್ನೆಲೆಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ತನ್ನ ಟೆಕ್ನಿಷಿಯನ್ಸ್ ಹಾಗೂ ಕಲಾವಿದರಿಗೆ ದುಬಾರಿ ಗಿಫ್ಟ್ ಗಳನ್ನ ನೀಡುವ ಮೂಲಕ ಉತ್ತೇಜನ ನೀಡಿದ್ದಾರೆ.
ಡೈಲಾಗ್ ರೈಟರ್ ಮಾಸ್ತಿ, ಕಥೆಗಾರ ಜಡೇಶ್ ಕೆ ಹಂಪಿ ಹಾಗೂ ನಟ ಸೂರಜ್ ಗೆ ತಲಾ ಒಂದೊಂದು ಸ್ವಿಫ್ಟ್ ಕಾರ್ ನ ಉಡುಗೊರೆಯಾಗಿ ನೀಡಿದರು.
ಅದಕ್ಕೂ ಮುನ್ನ ರಾಕ್ ಲೈನ್ ಮಾಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಟೇರ ಚಿತ್ರತಂಡ ಮಾಧ್ಯಮಗಳ ಜೊತೆ ಈ ಖುಷಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಸ್ವತಃ ನಟ ದರ್ಶನ್ ಜೊತೆಗಿದ್ದು ಕಾಟೇರ ಕಲಾವಿದ ಹಾಗೂ ತಂತ್ರಜ್ಞರಿಗೆ ತಮ್ಮ ಕೈಯ್ಯಾರೆ ಕೀಗಳನ್ನ ಹಸ್ತಾಂತರಿಸಿದರು. ರಾಕ್ ಲೈನ್ ನೀಡಿದ ಈ ಉತ್ತೇಜನ ನಿಜಕ್ಕೂ ಮೆಚ್ಚುವಂಥದ್ದು ಅಂತ ಅಭಿನಂದನೆ ಸಲ್ಲಿಸಿದರು ದರ್ಶನ್.