ರಾಜಕೀಯರಾಜ್ಯಸುದ್ದಿ

ಸುಳ್ಳುಗಳ ಸರಮಾಲೆಗಳೇ ಬಿಜೆಪಿ ಪಕ್ಷದ ಸಾಧನೆ – ತುಕಾರಂ

ವಿಜಯನಗರ : ಸುಳ್ಳುಗಳ ಸರಮಾಲೆಗಳೇ ಬಿಜೆಪಿ ಪಕ್ಷದ ಸಾಧನೆ ಬಿಜೆಪಿ ವಿರುದ್ಧ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ತುಕಾರಾಂ ವಾಗ್ದಾಳಿಯನ್ನ ನಡೆಸಿದ್ದಾರೆ.

ಬಿಜೆಪಿ ಜನರ ಮನೆಗಳನ್ನ ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ. ಮೋದಿ ಅವರು ಪ್ರಜೆಗಳ ಯೋಗಕ್ಷೇಮ ಸುಭಿಕ್ಷೆಯಾಗುವ ರೀತಿ ಆಡಳಿತ ಮಾಡಿಲ್ಲ. ದಶಕಗಳಿಂದ ದೇಶದ ಜನರಿಗೆ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಪೋಣಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

15 ಲಕ್ಷ ಕ್ಯಾಶ್ ಕೊಡಲಿಲ್ಲ, ಉದ್ಯೋಗ ಸೃಷ್ಟಿಸಲಿಲ್ಲ, ಬಡತನ ನಿರ್ಮೂಲನೆ ಮಾಡಲಿಲ್ಲ, ಬದಲಿಗೆ ಬರೀ ಭಾವನಾತ್ಮಕ ಬೊಗಳೆ ಬಿಡುತ್ತಲೆ ಜನರ ದಿಕ್ಕನ್ನು ತಪ್ಪಿಸಿದ್ದಾರೆ. ಸಾಮಾಜಿಕ ನ್ಯಾಯದ ಮೂಲಕ ನನ್ನಂತ ಕಡುಬಡವನಿಗೆ ಮೀಸಲಾತಿ ಕಾಂಗ್ರೆಸ್ ಕೊಟ್ಟಿದೆ. ಇದರಿಂದ ನಾಲ್ಕು ಬಾರಿ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರು.

ಸಂಸದ ಆಗಲಿ ಅಂತ ವರಿಷ್ಠರು ಲೋಕಸಭಾ ಟಿಕೆಟ್ ಕೊಟ್ಟಿದ್ದಾರೆ. ಜೋಡೆತ್ತುಗಳಂತೆ ಕೂಡ್ಲಿಗಿ ಕ್ಷೇತ್ರಕ್ಕೆ ತುಕಾರಾಂ, ಶ್ರೀನಿವಾಸ್ ಕೆಲಸ ಮಾಡುತ್ತೇವೆ. ಕೂಡ್ಲಿಗಿಯಲ್ಲಿ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಒಂದು ಸಿದ್ದಾಂತ ಇಟ್ಟುಕೊಂಡ ಪಕ್ಷ, ಸರಳ, ಸಜ್ಜನಿಕೆಯ ವ್ಯಕ್ತಿ ತುಕಾರಾಂರನ್ನ ಗೆಲ್ಲಿಸಿ, ಮತದಾರರು, ಕಾರ್ಯಕರ್ತರಿಗೆ ಶಾಸಕ ಶ್ರೀನಿವಾಸ್ ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button