ಸಲಾರ್ ಭಾಗ 1 ರ ಯಶಸ್ಸಿನ ನಂತರ ವಿಶ್ವದ್ಯಂತ ಸಿನಿ ಪ್ರಿಯರಲ್ಲಿ ಸಹಜವಾಗಿ ಸಲಾರ್ 2 ರ ಬಗ್ಗೆ ಹೆಚ್ಚಿನ ನಿರೀಕ್ಷೆ ಇದಿದ್ದು ಇನ್ನೇನು ಇದೆ ತಿಂಗಳಲ್ಲಿ ಆರಂಭವಾಗಬೇಕಿದ್ದ ಬಹು ಕೋಟಿ ಬಜೆಟ್ ನ ಸಲಾರ್ ಗೆ ಬ್ರೇಕ್ ಬಿದ್ದಿದೆ.
ಬ್ಲಾಕ್ ಬಸ್ಟರ್ ಹಿಟ್ ಸಲಾರ್ 1 ರ ಕದನ ವಿರಾಮದ ನಿರೀಕ್ಷಿತ ಉತ್ತರ ಭಾಗವಾಗಿ ಸಲಾರ್ 2 2025 ಕ್ಕೆ ಬಿಡುಗಡೆಯ ಭಾಗ್ಯವನ್ನು ಪಡೆದು ಕೊಳ್ಳಬೇಕಿತ್ತು.ಆದರೆ ಟಾಲಿ ವುಡ್ ನ ಅಂಗಳದಲ್ಲಿ ಓಡ್ತಾ ಇರೋ ಗುಸು ಗುಸು ಸುದ್ದಿನೇ ಬೇರೆ.
ಕಾತರದಿಂದ ಕಾಯುತ್ತಿರೋ ಸಲಾರ್ ಸೀಕ್ವೆಲ್ ನ ಚಿತ್ರೀಕರಣ ಸದ್ದಿಲ್ಲದೇ ನಿಂತಿದೆ. ಸೂಪರ್ ಹಿಟ್ ಚಿತ್ರ ಕೆಜಿಎಫ್ ಕೊಟ್ಟಂತ ಪ್ರಶಾಂತ್ ನೀಲ್ ಹಾಗು ಟಾಲಿ ವುಡ್ ಡಾರ್ಲಿಂಗ್ ಪ್ರಭಾಸ್ ಕಾಂಬಿನೇಶನ್ ನ ಸೂಪರ್ ಹಿಟ್ ಚಿತ್ರ ಸಲಾರ್ ಗಲ್ಲಾ ಪೆಟ್ಟಿಗೆಯನ್ನು ದೋಚಿತ್ತು..
ಅದೇ ಸೀಕ್ವೆನ್ಸ್ ನ ಮುಂದುವರೆದ ಭಾಗ ಸಲಾರ್ 2 ಶುರುವಾಗೋ ಮುಂಚೆ ಇಬ್ಬರಲ್ಲಿ ಎಲ್ಲವು ಸರಿ ಎಲ್ಲಾ.. ಹಾಗಾಗಿ ಸಿನಿಮಾಗೆ ಬ್ರೇಕ್ ಬಿದ್ದಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡ್ತಾ ಇದೆ. ಸುಮಾರು 300 ಕೋಟಿ ಇಂದ 400 ಕೋಟಿ ಗಳ ನಡುವೆ ಬೃಹತ್ ಬಜೆಟ್ ನಲ್ಲಿ ನಿರ್ಮಾಣವಾಗಬೇಕಿದ್ದ ಸಿನಿಮಾ. ಸದ್ದಿಲ್ಲದೇ ಸೈಲೆಂಟ್ ಆಗಿರುವುದರ ಕಾರಣ ಸಲಾರ್ ಟೀಮ್ ನಿಂದಲೇ ತಿಳಿಯಬೇಕಾಗಿದೆ.