ರಾಮನಗರ : ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾಗಿದ್ದಾರೆ. ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ಘಟನೆ ನಡೆದಿದೆ. ಬಂಡೆಯ ಮೇಲಿನ ನೀರಿನ ಹೊಂಡದಲ್ಲಿ ಈಜಲು ಹೋದ ಶಾಬಾಜ್ (14), ಸುಲ್ತಾನ್ (13), ರಿಹಾನ್ ಖಾನ್ (16) ಮೃತಪಟ್ಟಿದ್ದಾರೆ.
ಶಾಬಾಜ್ ಹಾಗೂ ರಿಯಾನ್ ಖಾನ್ ಸಹೋದರರಾಗಿದ್ದು, ಮೃತರೆಲ್ಲರೂ ರಾಮನಗರ ಟೌನ್‌ನ ಸುಲ್ತಾನ್ ನಗರದವರು. ಒಟ್ಟು 8 ಯುವಕರ ತಂಡ ನಮಾಜ್ ಮುಗಿಸಿದ ಈಜಲು ಹೊಂಡಕ್ಕೆ ಇಳಿದಿದ್ದರು. ಈ ವೇಳೆ ಮೂವರು ನೀರುಪಾಲಾಗಿದ್ದಾರೆ. ಐವರು ಸಾವಿನ ದವಡೆಯಿಂದ ಬಚಾವ್ ಆಗಿದ್ದಾರೆ.
ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.