ಕೊಪ್ಪಳ : ‘ಮೋದಿ ಮೋದಿ ಎಂದ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ’ ಎಂದ ಸಚಿವ ತಂಗಡಗಿಯ ವಿವಾದಾತ್ಮಕ ಹೇಳಿಕೆ ಹಿನ್ನೆಲೆ, ಮಾಜಿ ಶಾಸಕ ಬಸವರಾಜ್ ದಡೆಸೂಗುರು ಸಚಿವ ತಂಗಡಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೋದಿಯವರನ್ನ ಇಡೀ ದೇಶವೆ ನಾಯಕ ಎಂದು ಒಪ್ಪಿಕೊಂಡಿದೆ ನಿಮ್ಮ ಹೇಳಿಕೆ ಸರಿಯಲ್ಲ. ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿ ಬಿಲ್ಡಪ್ ತೆಗೆದುಕೊಳ್ಳುವುದನ್ನ ಮೊದಲು ಬಿಡಿ. ಮೂರು ಬಾರಿ ಮಂತ್ರಿಯಾದರು ಕೂಡ ಸೌಜನ್ಯವಾಗಿ ಮಾತಾಡುವುದನ್ನು ಕಲಿತಿಲ್ಲ. ಉಸ್ತುವಾರಿ ಸಚಿವ ತಂಗಡಗಿ ಏನು ಮಾತನಾಡುತ್ತೇನೆ ಎಂಬ ಕಲ್ಪನೆ ಇರಲಿ.
ಯಾರ ಬಗ್ಗೆಯಾದರು ಹಗುರವಾಗಿ ಮಾತನಾಡುವುದನ್ನು ಮೊದಲು ಬಿಡಬೇಕು. ಈ ರೀತಿ ಹೇಳಿಕೆ ನೀಡುವುದರಿಂದ ನೀನೇನು ಸಿದ್ದರಾಮಯ್ಯ ಅವರಂತೆ ಆಗೋದಿಲ್ಲ ಎಂದು ಮಾಜಿ ಶಾಸಕ ಬಸವರಾಜ್ ದಡೆಸೂಗುರು ಕೊಪ್ಪಳದ ಕಾರಟಗಿ ಬಿಜೆಪಿ ಕಚೇರಿಯ ಸುದ್ಧಿ ಗೋಷ್ಠಿಯಲ್ಲಿ ಹೇಳಿಕೆ ನೀಡಿದರು.