ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಮತದಾನದ ಜಾಗೃತಿ ಮೂಲಕ ವಿಶ್ವ ಹಿಂದೂ ಪರಿಷತ್ ಹಿಂದುತ್ವವನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಜನರಿಗೆ ನಾವು ಜಾಗೃತಿ ಮೂಡಿಸುತ್ತೇವೆ.
ಆದರೆ ಜನರು ಹಿಂದುತ್ವದ ಅಭ್ಯರ್ಥಿಗಳಿಗೆ ತಮ್ಮ ಮತವನ್ನು ಚಲಾಯಿಸುವ ಮೂಲಕ ಹಿಂದುತ್ವದ ಉಳಿವಿಗಾಗಿ ಆದ್ಯತೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಸಂಯುಕ್ತ ಮಹಾಮಂತ್ರಿ ಸ್ತಾನು ಮಾಲಯನ್ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಭಿಯಾನ ಮಾಡುವುದಿಲ್ಲ. ನಮ್ಮ ಗುರಿ ಹಿಂದುತ್ವವನ್ನು ಮತ್ತಷ್ಟು ಭದ್ರಪಡಿಸುವ ಕಾರ್ಯವಾಗಿದ.
ಈ ನಿಟ್ಟಿನಲ್ಲಿ ನಾವು ಹಿಂದುತ್ವದ ಅಭ್ಯರ್ಥಿಗಳಿಗೆ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು. ಕೃಷ್ಣ ಅರ್ಜನನಿಗೆ ಭಗವದ್ಗೀತೆಯನ್ನು ಬೋಧನೆ ಮಾಡಿ ಎಲ್ಲವನ್ನೂ ಹೇಳಿದ್ದಾನೆ. ಆದರೆ ನಿರ್ಧಾರ ಮಾತ್ರ ಅರ್ಜುನನಿಗೆ ಬಿಟ್ಟಿದ್ದಾನೆ. ಈ ನಿಟ್ಟಿನಲ್ಲಿ ನಾವು ಕೂಡ ಜನರಿಗೆ ಹಿಂದುತ್ವದ ಜಾಗೃತಿಗಾಗಿ ಜನರಲ್ಲಿ ಮನವಿ ಮಾಡುತ್ತೇವೆ. ಆನಂತರ ಎಲ್ಲವನ್ನೂ ಜನರ ನಿರ್ಧಾರಕ್ಕೆ ಬಿಡುತ್ತೇವೆ ಎಂದು ಅವರು ಹೇಳಿದರು.