ರಾಜಕೀಯರಾಜ್ಯಸುದ್ದಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಕನ್ಫರ್ಮಾ…?

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳ ನಡೆ ತೀವ್ರ ಕುತೂಹಲವನ್ನ ಮೂಡಿಸಿದೆ. ಮಾ.31 ರೊಳಗೆ ಅಭ್ಯರ್ಥಿ ಬಲಾವಣೆ ಬಿಜೆಪಿ ಹೈಕಮಾಂಡ್ ಮಾಡಿದ್ದರೆ ನಮ್ಮ ನಿರ್ಧಾರ ಹೇಳುವುದಾಗಿ ಶ್ರೀಗಳು ಎಚ್ಚರಿಕೆಯನ್ನ ನಿಡಿದ್ದಾರೆ.

ಇದರ ಮಧ್ಯ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಬಿಎಸ್‌ವೈ ಹೇಳಿದ್ದಾರೆ. ಈಗ ದಿಂಗಾಲೇಶ್ವರ ಶ್ರೀಗಳ ನಡೆ ತೀವ್ರ ಕುತೂಹಲ ಮೂಡಿಸಿದೆ. ಲಿಂಗಾಯತ ಪ್ರಾಬಲ್ಯ ಇರೋ ಧಾರವಾಡದ ಲೋಕ‌ ಅಖಾಡಕ್ಕೆ ಇಳಿಯುತ್ತಾರಾ ಶ್ರೀಗಳು..? ಈಗಾಗಲೇ ಕ್ಷೇತ್ರದಲ್ಲಿ‌ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಆ್ಯಕ್ಟೀವ್​​ ಆಗಿದ್ದಾರೆ.

ಬಿಜೆಪಿಯಿಂದ ಪ್ರಹ್ಲಾದ ಜೋಶಿ, ಕಾಂಗ್ರೆಸ್‌ನಿಂದ ವಿನೋದ ಅಸೂಟಿಗೆ ಟಿಕೆಟ್ ಫೈನಲ್ ಆಗಿದೆ. ಹಾಗೂ ಇಬ್ಬರು ಅಭ್ಯರ್ಥಿಗಳ ನೇರ ನೇರ ಫೈಟ್ ನಡುವೆ ದಿಂಗಾಲೇಶ್ವರ ಸ್ವಾಮೀಗಳ ಎಂಟ್ರಿಗೆ ಸಾಧ್ಯತೆ ಇದೆ. ತೀವ್ರ ಕುತೂಹಲಕ್ಕೆ ಕಾರಣವಾಗಿರೋ ಶ್ರೀಗಳು ಏಪ್ರಿಲ್ 2 ನಿರ್ಧಾರವಾಗುತ್ತದೆ. ಚುನಾವಣೆ ತಯಾರಿಯಲ್ಲಿ ಬ್ಯೂಸಿಯಾಗಿದ್ದ ಪ್ರಹ್ಲಾದ್ ಜೋಶಿಗೆ ಶ್ರೀಗಳ ನಡೆ ಗಲಿಬಿಲಿ ಸೃಷಟಿ ಮಾಡಿದೆ.

ಧಾರವಾಡ ಲೋಕಸಭಾ ಇತಿಹಾಸದಲ್ಲಿಯೇ ಇದುವರೆಗೂ ಆಗದನ್ನು ಶ್ರೀಗಳು ಮಾಡುತ್ತಾರಾ ಎಂಬುದೇ ಪ್ರಶ್ನೆಯಾಗಿದೆ. ಬಿಜೆಪಿ ನಾಯಕರು ಸ್ವಾಮೀಜಿಗಳ ಮನವೊಲಿಸವುದಾಗಿ ಮಾತಾಡುತ್ತಿದ್ದಾರೆ. ಈ ಬಾರಿ ಧಾರವಾಡ ಲೋಕ ಅಖಾಡದಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಯ ಮುನ್ಸೂಚನೆ ಕಂಡುಬರುತ್ತಿದೆ.ಈ ಬಾರಿ

ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು ಆ್ಯಕ್ಟೀವ್​ ಆಗಿದ್ದಾರೆ. ಬಿಜೆಪಿಯಿಂದ 5ನೇ ಬಾರಿಗೆ ಪ್ರಹ್ಲಾದ್ ಜೋಶಿ. ಕಾಂಗ್ರೆಸ್‌ನಿಂದ ನವಲಗುಂದ ಕಾಂಗ್ರೆಸ್ ಯುವ ನಾಯಕ ವಿನೋದ ಅಸೂಟಿ ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳ ಮಧ್ಯ ಲಿಂಗಾಯತ ಅಸ್ತ್ರ ಹಿಡಿದು ಚುನಾವಣೆ ಅಖಾಡಕ್ಕೆ ಬರ್ತಾರಾ ಸ್ವಾಮೀಜಿಗಳು..? ಎಂಬುದೇ ದೊಡ್ಡ ಪ್ರಶೆಯಾಗಿ ಕಾಡುತ್ತಿದೆ.

Comments (0)

Your email address will not be published. Required fields are marked *

Back to top button