ಯಲಹಂಕ : ಶಾಸಕ ವಿಶ್ವನಾಥ್ ಬೇಟಿಗೆ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ಆಗಮಿಸಿದ್ದಂತಹ ಸಂದರ್ಭದಲ್ಲಿ ಮಾತನಾಡಿ ಕ್ಷೇತ್ರದ 7 ಕಡೆ ಪ್ರಚಾರ ಆರಂಭವಾಗಿದೆ, ಆದರೆ ಯಲಹಂಕದಲ್ಲಿ ಆರಂಭ ಮಾಡಲು ಆಗಿಲ್ಲ. ರಾಜಕಾರಣದಲ್ಲಿ ಎಲ್ಲವೂ ಸರಾಗವಾಗಿ ಆದ್ರೆ ಅದು ರಾಜಕಾರಣ ಅನ್ನಿಸಿಕೊಳ್ಳಲ್ಲ ಎಂದು ಹೇಳಿದರು.

ಎಲ್ಲರಿಗೂ ಗೊತ್ತಿರುವಂತೆ ವಿಶ್ವನಾಥ್ ಅವರಿಗೆ ಮೊದಲಿನಿಂದಲು ಬೇಸರವಿದೆ. ಹಲವು ಭಾರಿ ವಿಶ್ವನಾಥ್ ಅವರಿಗೆ ಕರೆ ಮಾಡಿ ಮೆಸೆಜ್ ಸಹ ಮಾಡಿದ್ದೆ. ಆದ್ರೆ ಅವರು ಯಾವುದಕ್ಕೂ ಉತ್ತರ ಕೊಡಲಿಲ್ಲ. ಹೀಗಾಗಿ ನಾನೆ ಖುದ್ದು ಇಂದು ಅವರ ಮನೆಗೆ ಬೇಟಿ ಮಾಡಲು ಬಂದಿದ್ದೇ‌ನೆ. ಆದ್ರೆ ಅವರು ಮನೆಯಲಿಲ್ಲ ಅಂತ ವಾಚ್ ಮ್ಯಾನ್ ಹೇಳ್ತಿದ್ದಾರೆ ಎಂದು ಹೇಳಿದರು.

ಇನ್ನೂ ಎರಡು ಮೂರು ಭಾರಿ ಅವರನ್ನ ಕನ್ವಿನ್ಸ್ ಮಾಡುವ ಪ್ರಯತ್ನ ಮಾಡ್ತೀನಿ. ಇದೊಂದೆ ಚುನಾವಣೆ ಕೊನೆಯಲ್ಲ ಮುಂದೆಯು ನಾವು ಜೊತೆಯಾಗಿ ಸಾಗಬೇಕಾಗುತ್ತೆ. ವಿಶ್ವನಾಥ್ ಜೊತೆ ಮಾತನಾಡುವುದಾಗಿ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದಾರೆ. ಅಮಿತ್ ಶಾ ಅವರು ಬಂದಾಗ ಅವರ ಹಂತದಲ್ಲಿ ಬಗೆಹರಿಯುವ ಭರವಸೆ ಇದೆ ಎಂದರು.

ರಾಜಕಾರಣದಲ್ಲಿ ಎಲ್ಲವೂ ಸರಾಗವಾಗಿ ಆದ್ರೆ ಅದು ರಾಜಕಾರಣ ಅನ್ನಿಸಿಕೊಳ್ಳಲ್ಲ. ಅಲ್ಲಿ ಮುಳ್ಳಿನ ಹಾದಿ ಇರುತ್ತೆ ಕೆಂಪು ಗುಲಾಬಿ ಹಾದಿ ಇರಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡ್ತೀವಿ. ಅವರಿಗೂ ನಮಗೂ ಯಾವುದೇ ವೈಯುಕ್ತಿಕ ಬಿನ್ನಾಬಿಪ್ರಾಯಗಳಿಲ್ಲ. ಸಿಂಗನಾಯಕನಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿಕೆಯನ್ನ ನೀಡಿದ್ದಾರೆ

By admin

Leave a Reply

Your email address will not be published. Required fields are marked *

Verified by MonsterInsights