ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದು ವ್ಯಕ್ತಿಯನ್ನು ಕೊಲೆ ಮಾಡಿರುವಂತಹ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಘಟನೆ ನಡೆದಿದೆ.
49 ವರ್ಷದ ಪಂಚಲಿಂಗ ಮೃತ ದುರ್ದೈವಿಯಾಗಿದ್ದು, ಲಾರಿಯಲ್ಲಿನ ಮರಳು ಅನ್ ಲೋಡಿಂಗ್ ಕೆಲಸ ಮಾಡ್ತಿದ್ದ. ನಿನ್ನೆ ಲಾರಿ ಮನೆ ಬಳಿ ಓಡಾಡುವಾಗ ಧೂಳು ಎಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಉಂಟಾಗಿ ಪಂಚಲಿಂಗ ಅದೇ ಊರಿನ ಚಿರಂಜೀವಿ ಎಂಬಾತನ ಜೊತೆ ಗಲಾಟೆ ಮಾಡಿದ್ದ ಎಂದು ಹೇಳಲಾಗಿದೆ.
ನೆನ್ನೆ ರಾತ್ರಿ ಇಬ್ಬರು ಸ್ನೇಹಿತರನ್ನ ಕರೆತಂದು ಅದೇ ದ್ವೇಷಕ್ಕೆ ಪಂಚಲಿಂಗನಿಗೆ ಚಿರಂಜೀವಿ ಚಾಕು ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಪಂಚಲಿಂಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿ ಚಿರಂಜೀವಿ ಪರಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ತಲಘಟ್ಟ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.