ಬೆಂಗಳೂರು : ರಾತ್ರೋರಾತ್ರಿ ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ರಾಜೀವ್ ಗಾಂಧಿ ಪ್ರತಿಮೆಗೆ ಪಾಲಿಕೆ ಅಧಿಕಾರಿಗಳು ಮುಸುಕು ಹಾಕಿದ್ದಾರೆ. ರಾಜಕೀಯ ನಾಯಕರ ಪ್ರತಿಮೆಗೆ ಚುನಾವಣಾ ನೀತಿ ಸಂಹಿತೆ ಎಫೆಕ್ಟ್ ತಟ್ಟಿರುವುದು ಕಂಡುಬರುತ್ತಿದೆ.
ಮಂತ್ರಿ ಮಾಲ್ ಬಳಿ ಕಳೆದ 25 ವರ್ಷಗಳ ಹಿಂದೆ ರಾಜೀವ್ ಗಾಂಧಿ ಪ್ರತಿಮೆಯನ್ನ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಮತದಾರರ ಮೇಲೆ ಪ್ರತಿಮೆ ಪ್ರಭಾವ ಬೀರುತ್ತೆ ಅಂತ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದ್ದಾರೆ. ಹೀಗಾಗಿ ಕಳೆದ ರಾತ್ರಿ ಬಿಬಿಎಂಪಿ ಅಧಿಕಾರಿಗಳು ಪ್ರತಿಮೆಗೆ ಬಟ್ಟೆ ಹಾಕಿ ಮುಚ್ಚಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ನಡೆಗೆ ಕಾಂಗ್ರೆಸ್ ಖಂಡಿಸಿ ಕಿಡಿಕಾಡಿದ್ದಾರೆ, ರಾಜೀವ್ ಗಾಂಧಿ ಪ್ರತಿಮೆಗೆ ಮುಸುಕು ಹಾಕಿರುವುದನ್ನ ಖಂಡಿಸಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಂತೆ ಕೆಲಸ ಮಾಡಿತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.
ಕೂಡಲೇ ರಾಜೀವ್ ಗಾಂಧಿಗೆ ಮುಚ್ಚಲಾಗಿರೋ ಮುಸುಕು ತೆಗೆಯಬೇಕು ಅಂತ ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಬಿಜೆಪಿ ಹಾಗೂ ಚುನಾವಣಾ ಆಯೋಗದ ನಿರ್ಧಾರ ಖಂಡಿಸಿ ಕೈ ಕಾರ್ಯಕರ್ತರು ಪ್ರತಿಭಟನೆಯನ್ನ ನಡೆಸುತ್ತಿದ್ದಾರೆ.