ಬೆಂಗಳೂರು : ಸ್ಕೈವಾಕ್ ಬಳಿ ಕಸಕ್ಕೆ ಹಾಕಿದ್ದ ಬೆಂಕಿ ಜ್ವಾಲೆ ಹೊತ್ತಿಕೊಂಡು ಅಗ್ನಿ ಅವಘಡ ಸಂಭವಿಸಿರುವಂತಹ ಘಟನೆ ಬೆಂಗಳೂರಿನ ಜಕ್ಕಸಂಧ್ರದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಒಂದು ಅಗ್ನಿಶಾಮಕ ವಾಹನ ಹತ್ತು ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.
ಸ್ಕೈವಾಲ್ನ ಬಲಭಾಗಕ್ಕೆ ಬೆಂಕಿ ತಗುಲಿತ್ತು. ಇದರಿಂದಾಗಿ ಸ್ಕೈವಾಲ್ ಪಕ್ಕದ ರಸ್ತೆ ಬದಿ ನಿಲ್ಲಿಸಿದ್ದ ಒಂದು ಖಾಸಗಿ ಅಂಬ್ಯುಲೆನ್ಸ್ ಮುಂಭಾಗಕ್ಕೆ ಬೆಂಕಿ ತಗುಲಿರುವುದು ಕಂಡು ಬಂದಿದೆ. ಸಧ್ಯ ಈ ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂಧಿ ಯಶಸ್ವಿಯಾಗಿದ್ದಾರೆ.