ಬೆಂಗಳೂರು :ಕರ್ನಾಟಕ ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಅವರ ಕಾರಿನ ಚಾಲಕರು ಕೂಡ ಮಹಿಳೆಯೇ ಆಗಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರಿಗೆ ಇರಲಿ, ಪುರುಷರೆ ಆಗಿರಲಿ, ಅವರ ಕಾರನ್ನು ಡ್ರೈ ಮಾಡೋದು ಪುರುಷ ಡ್ರೈವರ್ ಆಗಿರುತ್ತಾರೆ. ಆದ್ರೆ ಮಂಜುಳಾ ಅವರ ಕಾರು ಚಾಲನೆ ಮಾಡೋರು ಪುರುಷ ಡ್ರೈವರ್ ಅಲ್ಲ. ಬದಲಿಗೆ ಕಾರು ಚಾಲಕಿ ಮಹಿಳೆ ಎಂಬುದು ಪ್ರಮುಖ ವಿಚಾರವಾಗಿದೆ.
ಮೂಲತಃ ಬೆಂಗಳೂರಿನವರೆ ಆಗಿರುವ ಕವಿತಾ, ಬಿಜೆಪಿ ರಾಜ್ಯಾಧ್ಯಕ್ಷೆ ಮಂಜುಳಾ ಅವರ ಕಾರು ಚಾಲನೆ ಮಾಡ್ತಾರೆ. ಈ ಹಿಂದೆ ದುಬೈ ಹಾಗೂ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಅವರು, ಕೋವಿಡ್ ಸಮಯದಲ್ಲಿ ಮರಳಿ ಬೆಂಗಳೂರಿಗೆ ಬಂದರು. ನಂತರ, ಎಬಿವಿಪಿ ಕಾರ್ಯಕರ್ತರೂ ಆಗಿರುವ ಕವಿತಾ ಅವರ ಪತಿ ಬಿಜೆಪಿ ರಾಜ್ಯಾಧ್ಯಕ್ಷೆ ಮಂಜುಳಾ ಅವರ ಕಾರು ಚಾಲನೆ ಮಾಡುವುದಕ್ಕೆ ಪತ್ನಿಗೆ ನೆರವಾಗಿದ್ದಾರೆ.
ಸಿ.ಮಂಜುಳಾ ಅವರನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ ಬಳಿಕ ಅವರಿಗೆ ಕಾರು ಚಾಲನೆ ಮಾಡಲು ಸೂಕ್ತ ವ್ಯಕ್ತಿ ಅವಶ್ಯಕತೆ ಇತ್ತು. ಇನ್ನು ತುರ್ತು ಸಂದರ್ಭದಲ್ಲಿ ಮಂಜುಳಾ ಅವರ ಕಾರು ಚಾಲನೆಗೆ ಕವಿತಾ ಅವರು ನೆರವಾಗುತ್ತಿದ್ದರಂತೆ. ಹೀಗೆ ಎಮರ್ಜೆನ್ಸಿ ಸಹಾಯಕ್ಕೆ ಬಂದಿದ್ದ ಕವಿತಾ ಅವರು ಈಗ ಮಂಜುಳಾ ಅವರಿಗೆ ಖಾಯಂ ಕಾರ್ ಚಲಾಯಿಸುವ ವ್ಯಕ್ತಿ ಆಗಿದ್ದಾರೆ. ಇದನ್ನು ನೋಡಿದ ಜನರು ಇದಲ್ವಾ ನಿಜವಾದ ಮಹಿಳಾ ಸಬಲೀಕರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.