ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಯ ಭ್ರಷ್ಟಾಚಾರದ ಬಗ್ಗೆ ನಿಮ್ಮ ಫ್ರೀಡಂ ಟಿವಿ ಮಾಡಿದ್ದ ವರದಿಯೊಂದು ಭಾರಿ ಇಂಪ್ಯಾಕ್ಟ್ ಮಾಡಿದೆ. ಅರ್ಕಾವತಿ ಲೇ ಔಟ್ ನ ಥಣಿಸಂದ್ರ ಹಾಗೂ ಜಕ್ಕೂರು ಗ್ರಾಮದಲ್ಲಿ ದೊಡ್ಡ ಗೋಲ್ ಮಾಲ್ ಬಗ್ಗೆ ಫ್ರೀಡಂ ಟಿವಿ ವರದಿ ಮಾಡಿತ್ತು. ದಾಖಲೆ ಸಮೇತ ಬಿಡಿಎ ಬಕಾಸುರರ ಅಕ್ರಮ ಬಯಲು ಮಾಡಿದ ಬೆನ್ನಲ್ಲೇ ಬಿಡಿಎ ನ ಬಿಗ್ ಬ್ರೋ ಕರ್ ಗೆ ಬಿಡಿಎ ಆಯುಕ್ತರು ಎನ್. ಜಯರಾಮ್ ಭಾರಿ ಶಾಕ್ ನೀಡಿದ್ದಾರೆ. ಫ್ರೀಡಂ ಟಿವಿ ವರದಿಯಿಂದ ಭಯಭೀತರಾಗಿರೋ ಬ್ರೋಕರ್ ಬಿಡಿಎ ಡೆಪ್ಯುಟಿ ಸೆಕ್ರೆಟರಿ 1 ಕಚೇರಿಗೆ ನುಗ್ಗಿ ಕಿರುಚಾಡಿದ್ದಾನೆ.
ಹಣ ಕೊಟ್ಟಿದ್ದೇನೆ ನನಗೆ ಸೈಟ್ ಹಂಚಿಕೆ ಆಗಲೇಬೇಕೆಂದು ಡಿಎಸ್-1 ಸಿಬ್ಬಂದಿ ಗೆ ಹಾಗೂ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಎಚ್ಚೆತ್ತುಕೊಂಡಿರೋ ಬಿಡಿಎ ಆಯುಕ್ತರು ಕೂಡಲೇ ಬ್ರೋಕರ್ ಗೆ ಹಂಚಿಕೆ ಆಗುತ್ತಿರೋ ಸೈಟ್ ಹಂಚಿಕೆ ಪ್ರಕ್ರಿಯೆ ನಿಲ್ಬೇಲಿಸುವಂತೆ ಸೂಚನೆ ನೀಡಿದ್ದಾರೆ. ಕಮಿಷನರ್ ಹೊಡೆತಕ್ಕೆ ಕಂಗಾಲಾಗಿರೋ ಡಿಎಸ್- 1 ಉಮೇಶ್ ಹಾಗೂ ಕಾರ್ಯದರ್ಶಿ ಶಾಂತರಾಜು ಸೈಟ್ ಹಂಚಿಕೆ ನಿಲ್ಲಿಸಿದ್ದಾರೆ. ಸದ್ಯ ಫ್ರೀಡಂ ಟಿವಿ ವರದಿ ಬೆನ್ನಲ್ಲೇ ನೂರಾರು ಕೋಟಿ ಬಿಡಿಎ ಪ್ರಾಪರ್ಟಿ ಗೋಲ್ಮಾಲ್ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ರೈತರಿಂದ ಜಿಪಿಎ ಮಾಡಿಸಿಕೊಂಡು ಬ್ರೋಕರ್ ನಿಂದ ಮಹಾ ವಂಚನೆ ನಡೆದಿದೆ.ನಿಜವಾದ ರೈತರ ಬದಲು ಬ್ರೋಕರ್ ಗೆ ಸೈಟ್ ನೀಡಿ ಅಧ್ವಾನ ಮಾಡಿರೋ ಡಿಎಸ್_1 ಹಾಗೂ ಸೆಕ್ರೆಟರಿ ಮೇಲೆಯೂ ಕ್ರಮ ಆಗಬೇಕೆಂದು ಒತ್ತಾಯ ಕೇಳಿಬಂದಿದೆ. ಇದೇ ಕಿಲಾಡಿ ಬ್ರೋಕರ್ ಅಧೀಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಬೆಮೆಲ್ ಸೊಸೈಟಿ ಸೈಟ್ ಹಂಚಿಕೆಯಲ್ಲೂ ಭಾರಿ ಹಣ ಮಾಡಿರುವ ಬಗ್ಗೆ ದೂರುಗಳು ಬಂದಿವೆ. ತಾತ್ಕಾಲಿಕವಾಗಿ ಸೈಟ್ ಹಂಚಿಕೆಗೆ ತಡೆ ನೀಡಲಾಗಿದ್ದು, ಬಿಡಿಎ ಅಂಗಳದಲ್ಲಿ ಕೆಲ ದಿನಗಳ ನಂತರ ದಂಧೆ ಮತ್ತೆ ಶುರುವಾಗುವ ಆತಂಕ ವ್ಯಕ್ತವಾಗಿದ್ದು, ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರು ಎಷ್ಟರ ಮಟ್ಟಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಾರೆ ಅನ್ನೋ ಪ್ರಶ್ನೆ ಇದೆ.
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಭ್ರಷ್ಟ ಅಧಿಕಾರಿಗಳ ಪಾಲಿಗೆ ಬಂಗಾರದ ತಾಣ. ದುಡ್ಡಿರೋ ಬ್ರೋಕರ್ ಗಳದ್ದೇ ದುನಿಯಾ… ಲಂಚ ಬಾಚೋದೆ ಬಿಡಿಎ ಅಧಿಕಾರಿಗಳ ಮೇನಿಯಾ ಅಂತಾ ಜನ ಹಿಡಿಶಾಪ ಹಾಕ್ತಿದ್ದಾರೆ. ಬಿಡಿಎ ಎಂಬ ಬೆಕ್ಕಿಗೆ ಗಂಟೆ ಕಟ್ಟೋರ್ಯಾರು ಅನ್ನೋದೇ ಜನರಲ್ಲಿರುವ ಯಕ್ಷಪ್ರಶ್ನೆ. ಇಂಥ ಅಕ್ರಮ ಸೈಟ್ ಹಂಚಿಕೆ ವಿಚಾರದಲ್ಲೂ ಸುಪ್ರೀಂ ಕೋರ್ಟ್ ನೇತೃತ್ವದ ಕಮಿಟಿ ಬೇಕೆಂಬ ಒತ್ತಾಯ ಸಹ ಕೇಳಿಬರ್ತಿದೆ.