ಭೈರವನ ಕೊನೆಯ ಪಾಠ ಮಾಡಲು ಬಂದ ಶಿವಣ್ಣನ ಲುಕ್ಕಿಗೆ ಫ್ಯಾನ್ಸ್ ಫಿದಾ…
ಹೇಮಂತ್ ಎಂ ರಾವ್ ನಿರ್ದೇಶನದ ಭೈರವನ ಕೊನೆಯ ಪಾಠ ಸಿನಿಮಾದ ಫಸ್ಟ್ಲು ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಲುಕ್ ನಲ್ಲಿ ಶಿವಣ್ಣ ಅದ್ಭುತವಾಗಿ ಕಾಣಿಸಿಕೊಂಡಿದ್ದು, ಶಿವಣ್ಣನ ಅಭಿಮಾನಿಗಳು ಈ ಲುಕನ್ನ, ಡಾಕ್ಟರ್ ರಾಜ್ ರವರ ಗುರಿ ಸಿನಿಮಾದ ಹಾಡಿನೊಂದಿಗೆ ಹೋಲಿಸಿದ್ದು ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಆಗ್ತಿದೆ..ಶಿವಣ್ಣ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಭೈರವನ ಕೊನೆ ಪಾಠವನ್ನು ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಇದರ ಟೈಟಲ್ ಎಲ್ಲರಲ್ಲೂ ಕುತೂಹಲವನ್ನ ಹುಟ್ಟು ಹಾಕಿತ್ತು..
ಇದೀಗ ಶಿವಣ್ಣನ ಹುಟ್ಟುಹಬ್ಬದ ಸಲುವಾಗಿ, ಅಡ್ವಾನ್ಸ್ ಗಿಫ್ಟ್ ನಂತೆ ಶಿವಣ್ಣನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ ಚಿತ್ರ ತಂಡ..
ಶಿವಣ್ಣನ ಈ ಹೊಸ ಲುಕ್ ಗೆ ಬಾರಿ ರೆಸ್ಪಾನ್ಸ್ ಸಿಕ್ಕಿದೆ..
ಸಿನಿಮಾದ ಮೇಲೆ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಿದೆ..
ಇನ್ನು ಈ ಲೋಕ ನಲ್ಲಿ ಇದುವರೆಗೂ ಯಾವ ಸಿನಿಮಾದಲ್ಲೂ ಶಿವಣ್ಣ ನಟಿಸಿಲ್ಲ..ಹಾಗಾಗಿ ಮೊದಲ ಬಾರಿಗೆ ಶಿವಣ್ಣ ಡಿಫರೆಂಟ್
ಗೆಟಪ್ ಎಲ್ಲರಿಗೂ ಇಷ್ಟ ವಾಗಿದೆ.
ಇನ್ನು ಸೋಶಿಯಲ್ ಮೀಡಿಯಾ ದಲ್ಲಿ ಡಾ. ಶಿವಣ್ಣನ ಈ ಲುಕ್ ತುಂಬಾನೇ ಟ್ರೆಂಡ್ ಆಗ್ತಿದ್ದು,ಡಾ. ರಾಜ್ ಕುಮಾರ್ ಅಭಿನಯದ ಹಳೆಯ ಕನ್ನಡ ಗುರಿ ಸಿನೆಮಾದ ಅಲ್ಲಾ ಅಲ್ಲಾ ಸಾಂಗ್ ನಲ್ಲಿ ಬರುವ ಅಣ್ಣಾವ್ರ ದಾಡಿಯ ಲುಕ್ ಗೆ, ಶಿವಣ್ಣ ರ ಇಂದಿನ ಭೈರವನ ಕೊನೆಯ ಪಾಠ ಸಿನೆಮಾದ ಲುಕ್ ಅನ್ನು ಕಂಪೇರ್ ಮಾಡಿ ಸಿನಿ ರಸಿಕರು ಥ್ರಿಲ್ ಆಗಿದ್ದಾರೆ..
ಒಟ್ಟಾರೆ ಶಿವಣ್ಣ ಈ
ಡಿಫರೆಂಟ್ ಲುಕ್ ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ..
ಪೆಪ್ಪರ್ ಅಂಡ್ ಸಾಲ್ಟ್ ಸ್ಟೈಲ್ ನ ಹೇರ್ ಲುಕ್,ಅರೆ ನೆರೆತ ದಾಡಿ, ಮೀಸೆ,ಖಡಕ್ ಲುಕ್,
ಯುದ್ಧಕ್ಕೆ ಸಜ್ಜಾದ ಪೋಷಾಕು, ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡು, ಫ್ಯಾನ್ಸ್ ಗಳಲ್ಲಿ ಕ್ರೇಜನ್ನು ಹೆಚ್ಚಿಸಿದೆ..
ಹಿಂದೆ ಅಪ್ಪಾಜಿ ರೀತಿಯ ಪಾತ್ರಗಳನ್ನು ಮಾಡುವುದರಲ್ಲಿ ಪ್ರಸಿದ್ಧಿ ಯಾಗಿದ್ದರು.. ಭೈರವನ ಪಾತ್ರ ಮಾಡುತ್ತಿರುವುದಕ್ಕೆ ನನಗೆ ಅತೀ ವ ಸಂತೋಷವಾಗಿದೆ. ಈ ಚಿತ್ರಕ್ಕೆ ‘ಲೆಸೆನ್ಸ್ ಫಾರ್ ಆಲ್ ಕಿಂಗ್ಸ್’ ಎಂಬ ಅಡಿ ಬರಹ ವಿದ್ದು, ಇದು ಕಥೆಗೆ ತುಂಬಾ ಪೂರಕವಾಗಿದೆ..
ವೃತ್ತಿ,ಬದುಕೋ ರೀತಿ ಎಲ್ಲದಕ್ಕೂ ನ್ಯಾಯ,ನೀತಿ ಮತ್ತು ಧರ್ಮ ಇದ್ದೇ ಇರುತ್ತದೆ. ಅದನ್ನು ಮೀರಿದರೆ ಏನಾಗುತ್ತದೆ? ಇವುಗಳನ್ನು ತಿಳಿಸಲು ಗುರು ಇರುತ್ತಾರೆ.. ಅವರೆಲ್ಲರೂ ಹೇಳುವ ಕೊನೆಯ ಪಾಠ ಏನು ಎನ್ನುವುದೇ ಈ ಸಿನಿಮಾ ಕಥೆ. ಇಂತಹ ಪಾತ್ರ ಮಾಡುವ ಆಸೆ ನನಗೆ ಬಹಳ ವರ್ಷಗಳಿಂದ ಇತ್ತು.ಅದು ಈಗ ನೆರವೇರಿದೆ ಎಂದು ಶಿವಣ್ಣ ತಿಳಿಸಿದ್ದಾರೆ..
ಈ ವರ್ಷದ ಅಂತ್ಯಕ್ಕೆ ಭೈರವನ ಕೊನೆ ಪಾಠ ಸಿನಿಮಾದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.. ಇದರಲ್ಲಿ 12ನೇ ಶತಮಾನದ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದ್ದರೂ ಇದು ಐತಿಹಾಸಿಕ ಸಿನಿಮಾ ಅಲ್ಲವಂತೆ.. ಹಾಗಾಗಿ ಸಹಜವಾಗಿ ಈ ಸಿನಿಮಾದ ಮೇಲೆ ಸಿನಿಪ್ರಿಯರ ಕ್ರೇಜ್ ಹೆಚ್ಚಾಗಿದೆ…


