Thursday, January 29, 2026
16.9 C
Bengaluru
Google search engine
LIVE
ಮನೆರಾಜಕೀಯಕೇಂದ್ರ ನಾಯಕರ ಸಂಧಾನದ ನಿರೀಕ್ಷೆಯಲ್ಲಿ ಸಂಗಣ್ಣ ಕರಡಿ

ಕೇಂದ್ರ ನಾಯಕರ ಸಂಧಾನದ ನಿರೀಕ್ಷೆಯಲ್ಲಿ ಸಂಗಣ್ಣ ಕರಡಿ

ಕೊಪ್ಪಳ : ಟಿಕೆಟ್ ಸಿಗದ ಹಿನ್ನೆಲೆ ಹಲವು ಸಂಧಾನ ಸಭೆಗಳು, ಮಾತುಕತೆ ನಡೆದಿವೆ. ರಾಜಕಿಯದಲ್ಲಿ ಮಾತು ಕಥೆ ನಡಿತಾಯಿರ್ತಾವೆ, ಮುರಿದು ಬಿಳ್ತಾಯಿರ್ತಾವೆ, ಆದ್ರೂ ನಾವು ಒಂದು ಕಡೆ ನಿಲ್ಲಬೇಕು ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.

ಟಿಕೇಟ್ ಮರು ಹಂಚಿಕೆಯಾಗಬೇಕು ಎಂದು ಬೇಡಿಕೆ ಇತ್ತು. ರಾಜ್ಯಸಭಾ ಮೆಂಬರ್ ಹಾಗೂ ಎಮ್ ಎಲ್ ಸಿ ಮಾಡುವ ಬೇಡಿಕೆ ಇತ್ತು. ಈ ಹಿನ್ನೆಲೆ ಚರ್ಚೆ ಮಾಡಲಾಗಿದೆ. ಈಗ ಮತ್ತೊಮ್ಮೆ ಮಾತನಾಡ್ತಿವಿ ಅಂತ ಹೇಳಿದ್ದಾರೆ ಈಗ ವಿಶ್ವಾಸ ಮಾಡಬೇಕಿದೆ. ಎಮ್ ಎಲ್ ಸಿ ಹಾಗೂ ರಾಜ್ಯಸಬಾ ಸದಸ್ಯ ಸ್ಥಾನ ನಮ್ಮ ಡಿಮ್ಯಾಂಡ್ ಇದೆ ಎಂದರು.

ಈಗ ಅಭ್ಯರ್ಥಿ ಟಿಕೇಟ್ ಬದಲಾವಣೆ ಮಾಡೋದು ಕಷ್ಟ ಇದೆ. ಎಪ್ರೀಲ್ 2 ಕ್ಕೆ ಅಮಿತ್ ಷಾ ರಾಜ್ಯಕ್ಕೆ ಬಂದಾಗ ಸರಿ ಹೋಗಬಹುದು ಎಂಬ ನಂಬಿಕೆಯಿದೆ. ಇವತ್ತಿನಿಂದ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗ್ತಿನಿ. ಇವತ್ತು ಸಂಜೆ ಕುಷ್ಟಗಿಯಿಂದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಹೋಗ್ತಿನಿ. ಪಕ್ಷಕ್ಕೆ ಬೆಂಬಲಿಸುವಂತೆ ನಮ್ಮ ಬೆಂಬಲಿಗರಿಗೆ ಮನವಿ ಮಾಡ್ತಿನಿ ಎಂದು ಹೇಳಿದರು

ನರೇಂದ್ರ ಮೋದಿಯವರನ್ನ ನೋಡಿ ಬಿಜೆಪಿ ಅಭ್ಯರ್ಥಿ ಯನ್ನ ಬೆಂಬಲಿಸುವಂತೆ ಮನವಿ ಮಾಡ್ತಿನಿ. ಸ್ಥಾನ ಮಾನ ಕೊಡೊದು ಬಿಡೋದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ನಾನು ಪಾರ್ಟಿಯಲ್ಲಿ ಇರ್ತಿನಿ ಎಂದು ಹೇಳಿದ್ದೆನೆ. ಟಿಕೆಟ್ ಸಿಗದ ಹಿನ್ನೆಲೆ ನನಗೆ ಯಾವುದೆ ಅಸಮಾಧಾನ ಇಲ್ಲ, ಜನರು ಪ್ರೀತಿ ವಿಶ್ವಾಸ, ಅಧಿಕಾರ ನೀಡಿದ್ದಾರೆ.

ನನಗೆ ಆಶಿರ್ವಾದ ಮಾಡಿದ ಜನರುಗೆ ಋಣಿಯಾಗಿರ್ತಿನಿ. ಮತ್ತೊಮ್ಮೆ ಸಂಸದ ಆಗೋ ಆಸೆ ಸಹಜವಾಗಿ ಇರ್ತದ, ಆಸೆ ಇರೋದು ಎಲ್ಲ ನಿಜ ಆಗಬೇಕು ಅಂತೇನಿಲ್ಲ. ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಹೇಳಿಕೆಯನ್ನ ನೀಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments