ಜನಸಾಮಾನ್ಯರ ಶಕ್ತಿ ಎಂಬ ಟ್ಯಾಗ್ ಲೈನ್ನೊಂದಿಗೆ ಫ್ರೀಡಂ ಟಿವಿ ಲೋಕಾರ್ಪಣೆಗೊಂಡಿದೆ. ಯಾವುದೇ ಸೆಲೆಬ್ರಿಟಿಗಳಿಗೆ ಮಣೆ ಹಾಕದೆ ಜನಸಾಮಾನ್ಯರಿಂದಲೇ ಫ್ರೀಡಂ ಟಿವಿ ವಾಹಿನಿ ಉದ್ಘಾಟನೆಯಾಗಿದೆ..
ಜನಸಾಮಾನ್ಯರ ಧ್ವನಿಯಾಗಬೇಕು ಎಂದು ಸಮಾನ ಮನಸ್ಕರೆಲ್ಲರೂ ಸೇರಿ ಕಟ್ಟಿದ್ದು ಈ ಫ್ರೀಡಂ ಟಿವಿ.. ವಾಹಿನಿಯ ಹೆಸ್ರಲ್ಲೇ ಸ್ವತಂತ್ರ್ಯವಿದೆ.. ಸ್ವತಂತ್ರ್ಯದ ಬುನಾದಿಯ ಮೇಲೆ ಕಟ್ಟಿರೋ ಫ್ರೀಡಂ ಟಿವಿ ಇಂದು ಲೋಕಾರ್ಪಣೆಗೊಂಡಿದೆ.. ಜನಸಾಮಾನ್ಯರಿಂದಲೇ ಜನಸಾಮಾನ್ಯರ ಶಕ್ತಿ ಪ್ರದರ್ಶನವಾಗಿದೆ.
ಈ ವಾಹಿನಿಯನ್ನು ಲೋಕಾರ್ಪಣೆಗೊಳಿಸಿದ್ದು ರೈತ, ಚಾಲಕ, ಕಟ್ಟಡ ಕಾರ್ಮಿಕ, ಪೌರಕಾರ್ಮಿಕರಂತಹ ಜನಸಾಮಾನ್ಯರು. ರೈತ ಅಂಬರೀಶ್, ಆಟೋ ಚಾಲಕ ರುದ್ರಮೂರ್ತಿ, ಪೌರ ಕಾರ್ಮಿಕ ಮಹಿಳೆ ವಲರ್ಮತಿ, ಕಟ್ಟಡ ಕಾರ್ಮಿಕ ಸುಂದರೇಶ್ರವರು ಫ್ರೀಡಂ ಟಿವಿಯನ್ನು ಲೋಕಾರ್ಪಣೆಗೊಳಿಸಿದರು. ಇವರೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರೇಗೌಡ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ನಟಿ ಪ್ರೇಮಾ ಫ್ರೀಡಂ ಟಿವಿ ಸ್ಟುಡಿಯೋ ಉದ್ಘಾಟಿಸಿದರು.
ನಮಗಾಗಿ ದೇಶಕ್ಕಾಗಿ ಬೆವರು ಸುರಿಸುವ ಸಾಮಾನ್ಯರು ವಾಹಿನಿಯನ್ನ ಉದ್ಘಾಟನೆ ಮಾಡಿದ್ದು, ಈ ವಾಹಿನಿ ಹತ್ತರಲ್ಲಿ ಇದು ಒಂದು ಅನ್ನೋರಿಗೆ ಈ ಮೂಲಕ ಡಿಫರೆಂಟ್ ಎಂಬುದನ್ನ ಉದ್ಘಾಟನೆಯಲ್ಲೇ ತೋರಿಸಿದ್ದೇವೆ…
ಬೆಂಗಳೂರು ನಗರದ ಹೃದಯಭಾಗ ಸದಾಶಿವನಗದಲ್ಲಿ ಫ್ರೀಡಂ ಟಿವಿ ಕಚೇರಿ ಉದ್ಘಾಟನೆಯಾಗಿದೆ. ಫ್ರೀಡಂ ಟಿವಿಯ ಸಂಸ್ಥಾಪಕರು, ಮ್ಯಾನೇಜಿಂಗ್ ಡೈರೆಕ್ಟರ್ ಆದ ಎಲ್ ಎಂ ನಾಗರಾಜ್ ಸಾರಥ್ಯದಲ್ಲಿ ಸುದ್ದಿವಾಹಿನಿ ಮುನ್ನುಗ್ಗುತ್ತಿದೆ. ಎಲ್ ಎಂ ನಾಗರಾಜ್ರವರ ಬೆನ್ನಿಗೆ ಯುವ, ಅನುಭವಿ, ಹಿರಿಯ ಪತ್ರಕರ್ತರು ನಿಂತಿದ್ದಾರೆ.
ದೈನಂದಿನ ಸುದ್ದಿಗಳ ಜೊತೆ ಜೊತೆಯಲ್ಲೇ ಧಾರ್ಮಿಕ, ಆಧ್ಯಾತ್ಮ, ಮನರಂಜನೆ, ಕ್ರೀಡೆ, ಹೀಗೆ ಪ್ರತಿಕ್ಷೇತ್ರದ ಆಗುಹೋಗುಗಳ ಮಾಹಿತಿ ನಿಮಗೆ ಸಿಗುತ್ತೆ. ಎಲ್ಲಾ ಕೇಬಲ್ ನೆಟ್ ವರ್ಕ್ಗಳಲ್ಲೂ ಫ್ರೀಡಂ ಟಿವಿ ನಿಮ್ಮ ಮನೆ ಮನ ತಲುಪಲಿದೆ. ಟಿವಿ ಜೊತೆಗೆ ಯೂಟ್ಯೂಬ್, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ಮೂಲಕವೂ ಫ್ರೀಡಂ ಟಿವಿ ನಿಮ್ಮ ಮನೆ ಮನೆಗೆ ಬರಲಿದೆ..