ಸಿನಿಮಾಸುದ್ದಿ

ಸಪ್ತ ಸಾಗರದಾಚೆ ಬೆಡಗಿ ರುಕ್ಮಿಣಿಗೆ ಪರಭಾಷೆಯಲ್ಲೂ ಡಿಮ್ಯಾಂಡ್

ಬೆಂಗಳೂರು: ಬೆಂಗಳೂರಿನ ಬೆಡಗಿ ರುಕ್ಮಿಣಿ ವಸಂತ್ ಗೆ ಅದೃಷ್ಟ ಖುಲಾಯಿಸಿದೆ.. ಸಪ್ತ ಸಾಗರದಾಚೆ ಎಲ್ಲೋ ಸಿನೆಮಾ ಅನೇಕ ಭಾಷೆಗಳಲ್ಲಿ ರಿಲೀಸ್ ಆದ ನಂತ್ರ, ಪ್ರಿಯ ಪಾತ್ರ ಎಲ್ಲರ ಮೆಚ್ಚಿಗೆ ಗಳಿಸಿತ್ತು.. ಇದೀಗ ನಟಿ ರುಕ್ಮಿಣಿ ಗೆ ತೆಲುಗು ಹಾಗು ತಮಿಳಿನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.. ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರೆ.

ಬೀರಬಲ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರುಕ್ಮಿಣಿ, ನಂತ್ರ ಸಪ್ತ ಸಾಗರದಾಚೆ ಎಲ್ಲೋ ಸಿನೆಮಾದಲ್ಲಿ ಅದ್ಭುತವಾಗಿ ಅಭಿನಯಿಸಿದ್ರು.. ಸದ್ಯ ಶ್ರೀ ಮುರಳಿ ನಟನೆಯ ಬಘೀರಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಶಿವಣ್ಣ ನಟನೆಯ ಭೈರತಿ ಯಲ್ಲೂ ಅಭಿನಯಿಸುತ್ತಿದ್ದಾರೆ.

ಸದ್ಯಕ್ಕೆ ತಮಿಳಿನ ನಟ ವಿಜಯ್ ಸೇತುಪತಿ ಜೊತೆಗೆ ಸಿನಿಮಾ ಮಾಡಿ ಮುಗಿಸಿದ್ದು, ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಹೊರ ಬೀಳಬೇಕಿದೆ.. ಈಗಾಗಲೇ ತೆಲುಗಿನ ಕೆಲವು ಸಿನಿಮಾಗಳ ಮಾತುಕತೆ ಆಗಿದ್ದು, ಶಿವ ಕಾರ್ತಿಕೆಯನ್ ಮುಂದಿನ ಸಿನಿಮಾದಲ್ಲಿ ನಾಯಕಿ ಪಾತ್ರ ಗಿಟ್ಟಿಸಿದ್ದಾರೆ.

Comments (0)

Your email address will not be published. Required fields are marked *

Back to top button