ಹುಬ್ಬಳ್ಳಿ: ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ನಡೆಯುತ್ತಿರುವ ಮತದಾನದಿಂದ ಜೆಡಿಎಸ್ –ಬಿಜೆಪಿಗೆ ಅಭೂತಪೂರ್ವ ಫಲಿತಾಂಶವೇ ಬರಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಮೊದಲ ಹಂತದ ಮತದಾನದ ವೇಳೆ ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಆ ಭಾಗದಲ್ಲಿ ಹೆಚ್ಚಿನ ಬೆಂಬಲ ದೊರೆಯುತ್ತಿದೆ ಎಂದು ಹೇಳಿದರು.
ದೇಶದ ಹಿತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಬೆಂಬಲ ಬೇಕಾಗಿದೆ. ಇದಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ಮತದಾನವಾಗಿದೆ ಎಂಬ ಮಾತ್ರಕ್ಕೆ ಆಗಲೇ ಮೋದಿ ಗೆದ್ದಿದ್ದಾರೆ ಎಂಬ ಭಾವನೆ ಬೇಡ. ಮೈತ್ರಿ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರು, ಮತದಾರರು ಮನೆಯಲ್ಲಿ ಕೂರದೆ ಅತಿ ಹೆಚ್ಚು ಮತದಾನ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜೋಶಿ ಕರೆ ನೀಡಿದರು.