ಬೆಂಗಳೂರಿನ ಯಲಹಂಕ ನ್ಯೂ ಟೌನ್ನಲ್ಲಿರುವ ವಿವೇಕಾನಂದ ಆಟದ ಮೈದಾನದಲ್ಲಿ ನಿನ್ನೆಯಿಂದ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋಗೆ ಇಂದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.. ಮಳೆಯ ನಡುವೆಯೂ ಸಾವಿರಾರು ಮಂದಿ ಫ್ರೀಡಂ ಟಿವಿ ಮೆಗಾ ಫೆಸ್ಟ್ ನಲ್ಲಿ ಪಾಲ್ಗೊಂಡು ಖುಷಿ ಪಟ್ರು..
2ನೇ ದಿನವಾದ ಶನಿವಾರ ಗುಳಿಕೆನ್ನೆ ಚೆಲುವೆ ನಟಿ, ಆ್ಯಂಕರ್ ಜಾಹ್ನವಿ ಎಕ್ಸ್ ಪೋದಲ್ಲಿ ನಮ್ಮೊಡನೆ ಪಾಲ್ಗೊಂಡಿದ್ರು. ಸ್ಟಾಲ್ ಗಳಿಗೆ ವಿಸಿಟ್ ಕೊಟ್ಟು, ಸ್ಪೆಷಲ್ ಸ್ಪೆಷಲ್ ತಿಂಡಿ ತಿನಿಸುಗಳನ್ನು ಟೇಸ್ಟ್ ಮಾಡಿದ್ರು.. ಈ ವೇಳೆ ನಟಿ ಕಂ ಆ್ಯಂಕರ್ ಜಾಹ್ನವಿ ಜೊತೆ ಸೆಲ್ಫಿಗಾಗಿ ಜನರು ಮುಗಿಬಿದ್ರು..
ಫ್ರೀಡಂ ಟಿವಿ ನಿರ್ಭೀಡ ಪತ್ರಿಕೋದ್ಯಮದ ಬಗ್ಗೆ ಮತ್ತು ಅಚ್ಚುಕಟ್ಟಾಗಿ ಆಯೋಜಿಸಿರುವ ಎಕ್ಸ್ ಪೋ ಬಗ್ಗೆ ನಟಿ ನಿರೂಪಕಿ ಜಾಹ್ನವಿ ಮೆಚ್ಚುಗೆ ವ್ಯಕ್ತಪಡಿಸಿದ್ರು..
ನಟಿ ನಿರೂಪಕಿ ಜಾಹ್ನವಿ ಮಾತ್ರವಲ್ಲ, ಖ್ಯಾತ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಕೂಡ ಪಾಲ್ಗೊಂಡಿದ್ರು..
ಎಕ್ಸ್ ಪೋದಲ್ಲಿ ಪಾಲ್ಗೊಂಡ ಸಾವಿರಾರು ಜನರನ್ನು ತಮ್ಮದೇ ಶೈಲಿಯಲ್ಲಿ ರಂಜಿಸಿದ್ರು.. ಫ್ರೀಡಂ ಟಿವಿ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ರು..
ಇಂದು ಕೂಡ ಮಕ್ಕಳು, ಮಹಿಳೆಯರಿಗಾಗಿ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.. ಡ್ಯಾನ್ಸ್, ಫ್ಯಾಷನ್.. ಗೇಮ್ಸ್.. ಹೀಗೆ ಸಾಕಷ್ಟು ಫನ್ ಇತ್ತು.. ಸಾಕಷ್ಟು ಮಹಿಳೆಯರು ತಮ್ಮ ವಯಸ್ಸನ್ನು ಮರೆತು ಮಸ್ತ್ ಡ್ಯಾನ್ಸ್ ಮಾಡಿದ್ದು ವಿಶೇಷ..
ಇಂದು ಕೂಡ ಸ್ಟಾಲ್ ಗಳೆಲ್ಲ ಬ್ಯುಸಿ ಆಗಿದ್ವು.. ಉತ್ತಮವಾಗಿ ರೆಸ್ಪಾನ್ಸ್ ಸಿಕ್ತಿದೆ ಎಂದು ವ್ಯಾಪಾರಿಗಳು ಸಹ ಖುಷಿ ಆದ್ರು..
ನಾಳೆಯೂ ಕೂಡ ಯಲಹಂಕದಲ್ಲಿ ಫ್ರೀಡಂ ಟಿವಿ ಎಕ್ಸ್ ಪೋ ಇರಲಿದೆ.. ಅಂತಿಮದ ಕಾರ್ಯಕ್ರಮದಲ್ಲಿ ಬಹುಮುಖ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಸಚಿವರಾದ ಬೈರತಿ ಸುರೇಶ್, ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ್, ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಸೇರಿ ಹಲವು ಗಣ್ಯರು ಪಾಲ್ಗೊಳ್ಳಿದ್ದಾರೆ.
14 ಮಂದಿ ಮಹಿಳಾ ಸಾಧಕಿಯರಿಗೆ ಫ್ರೀಡಂಟಿವಿ ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.. ನೀವು ಜೊತೆಯಾಗಿ ನಮ್ಮೊಂದಿಗೆ