Wednesday, April 30, 2025
29.2 C
Bengaluru
LIVE
ಮನೆಜಿಲ್ಲೆರಸ್ತೆಗೆ ಬಂದ ಸಲಗ...!

ರಸ್ತೆಗೆ ಬಂದ ಸಲಗ…!

ಕೊಡಗು: ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಇದ್ದಕ್ಕಿದ್ದಂತೆ ಸಲಗವೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿತು.

ಆನೆ ನೋಡಿ ಗಾಬರಿಯಿಂದ ಪ್ರಯಾಣಿಕರು ತಮ್ಮ ವಾಹನಗಳನ್ನು ಯುಟರ್ನ್​ ಮಾಡಿಕೊಂಡು ವಾಪಸ್​ ಹೋಗಬೇಕಾಯಿತು. ಕಾಡಿನಿಂದ ರಸ್ತೆಗಿಳಿದ ಕಾಡಾನೆ ಗಾಬರಿಯಿಂದ ಯಾವ ಕಡೆ ತೆರಳಬೇಕು ತಿಳಿಯದೇ ರಸ್ತೆಯಲ್ಲೇ ಸ್ವಲ್ಪ ಹೊತ್ತು ನಿಂತು ಸಾರ್ವಜನಿಕರನ್ನು  ತಬ್ಬಿಬ್ಬುಗೊಳಿಸಿತು.

ನಂತರ ರಸ್ತೆಯಲ್ಲಿ ಸಾಗಿಬಂದ ಆನೆ ಮೆತ್ತಗೆ ರಸ್ತೆ ಬದಿಯಲ್ಲಿರುವ ತೋಟದ ಗೇಟ್ ಅನ್ನು ಸೊಂಡಲಿನಿಂದ ನೂಕಿ ಒಳಗೆ ನುಸುಳಿಕೊಂಡು ಹೋಯಿತು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments