Wednesday, April 30, 2025
30.3 C
Bengaluru
LIVE
ಮನೆಆರೋಗ್ಯಹುಳು ಹಿಡಿದ ‘ಅಕ್ಕಿ’ ತಿನ್ಬೋದಾ? ತಿಂದ್ರೆ, ಏನಾಗುತ್ತೆ?

ಹುಳು ಹಿಡಿದ ‘ಅಕ್ಕಿ’ ತಿನ್ಬೋದಾ? ತಿಂದ್ರೆ, ಏನಾಗುತ್ತೆ?

ಸಾಮಾನ್ಯವಾಗಿ ನಗರವಾಸಿಗಳು 25 ಮತ್ತು 30 ಕೆಜಿ ಅಕ್ಕಿ ಚೀಲಗಳನ್ನ ಮನೆಗೆ ತರುತ್ತಾರೆ. ಸಣ್ಣ ಕುಟುಂಬಗಳಿಗೆ ಎರಡು ಅಥವಾ ಮೂರು ತಿಂಗಳಿಗೆ ಇವು ಬರುತ್ತವೆ. ಹುಳುಗಳು ಬರುವ ಸಾಧ್ಯತೆ ಕಮ್ಮಿ. ಆದ್ರೆ, ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ಬೇಕಾದಷ್ಟು ಅಕ್ಕಿಯನ್ನ ಮನೆಗೆ ತರುತ್ತಾರೆ. ಅಕ್ಕಿಯು ದೀರ್ಘಾವಧಿಯ ಶೇಖರಣೆಯಿಂದಾಗಿ ಕೀಟಗಳಿಗೆ ಒಳಗಾಗುತ್ತದೆ. ಆಗ ಅಕ್ಕಿಯನ್ನ ತೊಳೆದು, ಹುಳುಗಳನ್ನ ಬೇರ್ಪಡಿ, ಅನ್ನ ಬೇಯಿಸಿಕೊಂಡು ತಿನ್ನಲಾಗುತ್ತದೆ. ಹೀಗೆ ಮಾಡುವುದು ಒಳ್ಳೆಯದ

ತಜ್ಞರ ವಿವರಗಳ ಪ್ರಕಾರ, ಸಂಗ್ರಹಿಸಿದ ಅಕ್ಕಿಗೆ ಹುಳುಗಳು, ಮರಿಹುಳುಗಳು ಹೆಚ್ಚಾಗಿ ಬರುತ್ತವೆ. ಆದರೆ ಹುಳುಗಳನ್ನ ತೆಗೆದು ಅನ್ನವನ್ನ ಬೇಯಿಸಿ ತಿಂದರೆ ದೊಡ್ಡ ಅಪಾಯವಿಲ್ಲ ಎನ್ನುತ್ತಾರೆ ತಜ್ಞರು. ಎಲ್ಲರೂ ಅಕ್ಕಿಯನ್ನ ಬೇಯಿಸುವ ಮೊದಲು ತೊಳೆಯುತ್ತಾರೆ. ಅದರ ನಂತರ ಅದನ್ನ ನೀರಿನಲ್ಲಿ ಕುದಿಸಲಾಗುತ್ತದೆ. ಆ ಶಾಖದಿಂದಾಗಿ ಅಕ್ಕಿಯಲ್ಲಿರುವ ಬ್ಯಾಕ್ಟೀರಿಯಾ ಅಥವಾ ಕೀಟಗಳ ತ್ಯಾಜ್ಯವು ಸಾಯುತ್ತದೆ.

ಹಾಗಾಗಿ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂಬುದು ತಜ್ಞರ ವಾದ. ಅಲ್ಲದೇ ಅಕ್ಕಿಗೆ ಕ್ರಿಮಿ ಕೀಟಗಳು ಬರದಂತೆ ನೋಡಿಕೊಳ್ಳಲು, ಇತ್ತೀಚಿನ ದಿನಗಳಲ್ಲಿ ಬೋರಿಕ್ ಪೌಡರ್, ಕ್ಯಾಸ್ಟರ್ ಆಯಿಲ್ ಮುಂತಾದವುಗಳನ್ನ ಕೂಡ ಅಕ್ಕಿ ತೊಟ್ಟಿಗಳಲ್ಲಿ ಇಡುತ್ತಾರೆ. ನೀವೂ ಇದನ್ನು ಪ್ರಯತ್ನಿಸಬಹುದು. ಅಲ್ಲದೆ, ಅಕ್ಕಿ ಚೀಲಗಳು ಮತ್ತು ಪೆಟ್ಟಿಗೆಗಳ ಬಳಿ ಇರುವ ಪ್ರದೇಶದಲ್ಲಿ ತೇವಾಂಶ ಇರಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಲವಂಗ, ಇಂಗು, ಒಣ ಮೆಣಸಿನಕಾಯಿ, ಕಾಳುಮೆಣಸು, ಬೆಳ್ಳುಳ್ಳಿ ಎಸಳುಗಳನ್ನ ಅಕ್ಕಿ ಸಂಗ್ರಹಿಸುವ ಜಾಗದಲ್ಲಿ ಇಡುವುದರಿಂದ ಕೀಟಗಳು ವಾಸನೆಯಿಂದ ದೂರವಿರುತ್ತವೆ ಎಂದು ಹೇಳಲಾಗುತ್ತದೆ. ಬೇವಿನ ಸೊಪ್ಪು ಮತ್ತು ಬಿರಿಯಾನಿ ಸೊಪ್ಪನ್ನು ಅಕ್ಕಿಗೆ ಸೇರಿಸಿದರೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments