Tuesday, June 24, 2025
27.5 C
Bengaluru
Google search engine
LIVE
ಮನೆಆರೋಗ್ಯಬಣ್ಣ ಬಣ್ಣದ ಆಹಾರ, ತರುವುದು ಆರೋಗ್ಯಕ್ಕೆ ಸಂಚಕಾರ: 'ರೊಡಮೈನ್ ಬಿ' ಬಗ್ಗೆ ನೀವೆ ನೋಡಿ!

ಬಣ್ಣ ಬಣ್ಣದ ಆಹಾರ, ತರುವುದು ಆರೋಗ್ಯಕ್ಕೆ ಸಂಚಕಾರ: ‘ರೊಡಮೈನ್ ಬಿ’ ಬಗ್ಗೆ ನೀವೆ ನೋಡಿ!

ಎಲ್ಲರೂ ಇಷ್ಟಪಡುವಂತಹ ಅದರಲ್ಲೂ ಮಕ್ಕಳಿಗೆ ಅಚ್ಚುಮೆಚ್ಚಾಗಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಅತಿಯಾಗಿ ಕೃತಕ ಬಣ್ಣದ ಬಳಕೆ ಮಾಡಲಾಗುತ್ತಿದೆ ಎಂದು ಇವುಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಬಳಸಲಾಗುವ ಕೃತಕ ಬಣ್ಣಗಳಲ್ಲಿ ರೋಡಮೈನ್ ಬಿ ಎಂಬ ಅಂಶವು ಪತ್ತೆಯಾಗಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.

ದೀರ್ಘಕಾಲ ತನಕ ಕೃತಕ ಬಣ್ಣ ಬಳಸುವುದರಿಂದ ಮಕ್ಕಳಲ್ಲಿ ಕ್ಯಾನ್ಸರ್ ಕೂಡ ಕಂಡುಬರುವುದು ಎಂದು ತಜ್ಞರು ತಿಳಿಸಿದ್ದಾರೆ.

ರೊಡಮೈನ್ ಬಿ ಎಂದರೇನು?

ರೊಡಮೈನ್ ಬಿ ಒಂದು ರಾಸಾಯನಿಕ ಸಂಯುಕ್ತವಾಗಿದ್ದು, ಇದನ್ನು ರೇಷ್ಮೆ, ಸೆಣಬು, ಚರ್ಮ, ಹತ್ತಿ ಮತ್ತು ಉಣ್ಣೆಯನ್ನು ಬಣ್ಣ ಮಾಡಲು ಸಿಂಥೆಟಿಕ್ ಬಣ್ಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ, ಹಾಗೆಯೇ ಸೌಂದರ್ಯವರ್ಧಕಗಳು ಮತ್ತು ಪ್ಲಾಸ್ಟಿಕ್ ಉದ್ಯಮಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದರ ಬೆಲೆ ಕಡಿಮೆ. ಇದನ್ನು ಆಹಾರಕ್ಕೆ ಬಣ್ಣ ನೀಡಲು ಹೆಚ್ಚು ಬಳಸಲಾಗುತ್ತಿದೆ. ಅದರಲ್ಲೂ ಬೀದಿ ಬದಿಯ ತಿಂಡಿಗಳಲ್ಲಿ ಹೆಚ್ಚು ಬಳಸಲಾಗುತ್ತಿದೆ. ಮೆಣಸಿನ ಪುಡಿ ಮತ್ತು ಮೆಣಸಿನ ಎಣ್ಣೆಯಂತಹ ವಸ್ತುಗಳಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿದೆ. ಇದರಿಂದ ಹಲವಾರು ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. ಇದು ಚರ್ಮ ಮತ್ತು ಕಣ್ಣಿನ ಕಿರಿಕಿರಿ ಉಂಟು ಮಾಡುವ ಜತೆಗೆ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಲ್ಲದು.

ರೋಡಮೈನ್ ಬಿ ಅಷ್ಟೇ ಅಲ್ಲದೆ, ಇತ್ತೀಚೆಗೆ ಆಹಾರದಲ್ಲಿ ಹೆಚ್ಚು ಸನ್‌ಸೆಟ್ ಯೆಲ್ಲೋ, ಕಾರ್ಮೋಸಿನ್ ಮತ್ತು ಟಾರ್ಟ್ರಾಜಿನ್ ಎಂಬ ರಾಸಾಯನಿಕಗಳನ್ನೂ ಕೂಡ ಬಳಕೆ ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಸಂಸ್ಕರಿಸಿದ ಆಹಾರಗಳಲ್ಲಿ ಇವುಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಸಂಸ್ಕರಿಸಿದ ಆಹಾರವನ್ನು ಗುರುತಿಸುವುದು ಹೇಗೆ?

ನೋವಾ ಎಂದು ಕರೆಯಲ್ಪಡುವ ಮೊಂಟೆರೊ ವ್ಯವಸ್ಥೆಯು ಆಹಾರಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸುತ್ತದೆ. ಸಂಸ್ಕರಿಸದ, ಕನಿಷ್ಠವಾಗಿ ಸಂಸ್ಕರಿಸಿದ ಆಹಾರಗಳು, ಸಂಸ್ಕರಿಸಿದ ಆಹಾರಗಳು, ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು.

ವರ್ಗ 1: ಸಂಸ್ಕರಿಸದ ಆಹಾರಗಳು: ಧಾನ್ಯಗಳು, ದ್ವಿದಳ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಕಾಳುಗಳು, ಹಾಲು ಮತ್ತು ಮಾಂಸ ಈ ವರ್ಗದ ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ ಯಾವುದೇ ಪದಾರ್ಥಗಳ ಸೇರ್ಪಡೆಗಳಿಂದ ಅವು ಬದಲಾಗುವುದಿಲ್ಲ. ಒಂದು ವೇಳೆ ಮಿಶ್ರಣವಾಗಿದ್ದರೂ ಅವುಗಳನ್ನು ತೆಗೆಯಬಹುದು.

ವರ್ಗ 2: ಕನಿಷ್ಟ ಸಂಸ್ಕರಿಸಿದ ಆಹಾರ ಪದಾರ್ಥಗಳು: ಈ ವರ್ಗದಲ್ಲಿ ಸಕ್ಕರೆ, ಉಪ್ಪು, ಎಣ್ಣೆ ಬರುತ್ತವೆ. ಇವುಗಳನ್ನು ಶುದ್ಧೀಕರಣದಂತಹ ಕೈಗಾರಿಕಾ ಪ್ರಕ್ರಿಯೆಗಳ ಮೂಲಕ ಉತ್ಪಾದಿಸಲಾಗುತ್ತದೆ.

ವರ್ಗ 3: ಸಂಸ್ಕರಿಸಿದ ಆಹಾರಗಳು; ಈ ವರ್ಗದಲ್ಲಿ ಬ್ರೆಡ್ ಮತ್ತು ಚೀಸ್ ಗಳು ಬರುತ್ತವೆ. ಇಲ್ಲಿ ಆಹಾರಗಳ ಬಾಳಕೆಯನ್ನು ಹೆಚ್ಚಿಸಲು ಹಾಗೂ ರುಚಿಕರ ಹಾಗೂ ಕಣ್ಣಿಗೆ ಆನಂದವನ್ನು ತರುವ ರೀತಿಯಲ್ಲಿ ಸಿದ್ಧಪಡಿಸಲಾಗುತ್ತದೆ.

ವರ್ಗ 4: ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು; ಈ ಆಹಾರಗಳ ಪದಾರ್ಥಗಳು ಹೆಚ್ಚು ರುಚಿಕರ ಹಾಗೂ ಆಗಾಗ್ಗೆ ತಿನ್ನಬೇಕೆಂಬ ಭಾವನೆ ಹುಟ್ಟುವಂತೆ ಮಾಡಲಾಗುತ್ತದೆ. ಇಲ್ಲಿ ಬಣ್ಣ ಹಾಗೂ ಸುವಾಸನೆಗಳ ಬರಲು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments