ಬೆಂಗಳೂರು: ಬೆಳ್ಳಂಬೆಳಗ್ಗೆ ಬ್ಯಾಟರಾಯನಪುರದಲ್ಲಿ ಉತ್ಸಾಹದಿಂದ ಮತದಾನ ಮಾಡಲು ಆಗಮಿಸಿದ ಮತದಾರರು ಪರದಾಡುವಂತಾಗಿದೆ.
ಬೂತ್ ನಂಬರ್ ೪೩೫ ಸೇಂಟ್ ಜೇಮ್ಸ್ ಸ್ಕೂಲ್ ಬ್ಯಾಟರಾಯನಪುರ ಕ್ಷೇತ್ರದಲ್ಲಿ 2 ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ಇದರಿಂದ ಬೇಸರ ವ್ಯಕ್ತಪಡಿಸಿದ ಹಲವು ಮತದಾರರು ಮತದಾನ ಮಾಡದೆ ವಾಪಾಸ್ ತೆರಳಿದ್ದಾರೆ. ಇವಿಎಮ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಮತದಾನ ಮಾಡಲು ಅಡ್ಡಿಯಾಗಿದೆ. ಚುನಾವಣಾ ಅಧಿಕಾರಿಗಳು ಇವಿಎಮ್ ಸರಿಪಡಿಸಲು ಹೆಣಗಾಡುತ್ತಿದ್ದಾರೆ .