ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಜನತಾ ಸಂವಾದ ಸದನ ಕಾರ್ಯಕ್ರಮ ನಡೆಸಿದರು. ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗದಗದ ಬೆಟಗೇರಿ ನಗರದ ಸಮಸ್ಯೆಗಳ ಬಗ್ಗೆ ಜನತಾ ಸಂವಾದದಲ್ಲಿ ಚರ್ಚಿಸಲಾಯ್ತು.
ಅನಿಲ್ ಮೆಣಸಿನಕಾಯಿ ತಂಡದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೀರಿನ ಸಮಸ್ಯೆಯ ವಿಷಯ ಅತಿ ಹೆಚ್ಚು ಸದ್ದು ಮಾಡಿದು. ಗದಗದ ಬೆಟಗೇರಿಯಲ್ಲಿ ಸಪೂರ್ಣವಾಗಿ ಕುಡಿಯುವ ನೀರಿಲ್ಲ. ಹೀಗಾಗಿ ಇಲ್ಲಿಯ ಯುವಕರಿಗೆ ಕನ್ಯಾ ಸಿಗ್ತಿಲ್ಲ ಅಂತಾ ಜನತಾ ಸಂವಾದ ಕಾರ್ಯಕ್ರಮದಲ್ಲಿ ಯುವಕನ್ನೂಬ್ಬ ಪ್ರಸ್ತಾಪಿಸಿದನು.
ಗದಗ ಬೆಟಗೇರಿಗೆ ಕುಡಿಯುವ ನೀರು ಕಲ್ಪಿಸುವ ಮೂಲಕ ಯುವಕರಿಗೆ ಕನ್ಯಾ ಸಿಗುವಂತೆ ಮಾಡಬೇಕೆಂದು. ಯುವಕನ ಪ್ರಶ್ನೆಗೆ ನಗೆಗಡಲಲ್ಲಿ ತೆಳಿದ ಸಭೆಯಾಗಿದು, ಇದು ಗಂಭೀರದ ವಿಷಯ ಅಂತಾನೂ ತಲೆದೂಗಿಸಿದರು. ಸಂವಾದದಲ್ಲಿ ಕೇಂದ್ರೀಯ ವಿದ್ಯಾಲಯದ ಬೇಡಿಕೆ, ವಿಶ್ವ ವಿದ್ಯಾಲಯ ಸ್ಥಾಪನೆ, ಈರುಳ್ಳಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ. ನೇಕಾರರ ಸಮಸ್ಯೆ, ಉದ್ಯೋಗ, ರಸ್ತೆ, ಮೂಲಸೌಕರ್ಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
ಸಂಘ ಸಂಸ್ಥೆ, ಸಂಘಟನೆ ಸದಸ್ಯರು ಸಂವಾದದಲ್ಲಿ ಭಾಗಿಯಾಗಿ ವಿಚಾರ ಮಂಡಿಸಿದರು. ಆಯ್ಕೆಯಾದ ನಂತರ ಗದಗ ಬೆಟಗೇರಿಯ ಸಮಸ್ಯೆಗೆ ಸ್ವಂದಿಸಬೇಕು ಅಂತಾ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.