ರಾಜಕೀಯಸುದ್ದಿ

ಬಳ್ಳಾರಿ ಎರಡನೇ ಹಂತದ ಚುನಾವಣೆ ಸಿದ್ದತೆ

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ನಾಳೆ ಎರಡನೇ ಹಂತದ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಬಳ್ಳಾರಿ ವಿಜಯನಗರ ಸೇರಿ ಒಟ್ಟು 8 ಕಡೆ ಮಸ್ಟರಿಂಗ್ ಕಾರ್ಯ ನಡೆದಿದೆ. ಚುನಾವಣಾ ಸಿಬ್ಬಂದಿಗಳನ್ನ ಮಸ್ಟರಿಂಗ್ ಸೆಂಟರ್ ನಲ್ಲಿ ಅಧಿಕಾರಿಗಳು ಮಾನಿಟರಿಂಗ್ ಮತ್ತು ಗೈಡ್ ಮಾಡುತ್ತಿದ್ದಾರೆ. ಚುನಾವಣೆಗೆ ಸಂಬಂದಪಟ್ಟ ದಾಖಲೆಗಳು , ಮತಪಟ್ಟಿ ಹಾಗೂ ಮತ ಯಂತ್ರಗಳನ್ನ ಸಿಬ್ಬಂದಿಗಳಿಗೆ ವಿತರಿಸಿ ನಿಯೋಜನಾ ಸ್ಥಳಗಳಿಗೆ ಹೊರಡಲು ಅಧಿಕಾರಿಗಳು ಸಿದ್ಧತೆ ನಡೆಸಿದಾರೆ.

ಬಳ್ಳಾರಿ ಜಿಲ್ಲೆಯಾದ್ಯಂತ ಒಟ್ಟು 1972 ಮತಗಟ್ಟೆ ಸ್ಥಾಪಿಸಲಾಗಿದ್ದು, 5972 ಸಿಬ್ಬಂದಿಗಳನ್ನ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇನ್ನೂ ಜಿಲ್ಲೆಯಲ್ಲಿ 299 ಸೂಕ್ಷ್ಮ ಮತಗಟ್ಟೆಗಳು ಅಂತ ಗುರುತಿಸಲಾಗಿದೆ, 600 ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲಾಗಿದ್ದು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿದೆ. ಉಳಿದಂತೆ ಜಿಲ್ಲೆಯಾದ್ಯಂತ ಬಂದೋಬಸ್ತಿಗೆ ಒಟ್ಟು 2048 ಪೊಲೀಸ್ ಸಿಬ್ಬಂದಿಗಳನ್ನ ನೇಮಿಸಿದ್ದು ಮೂರು ಕಡೆ ಸೇನಾ ತುಕಡಿ ತಂಡಗಳನ್ನ ಬಳಸಲಾಗ್ತಿದೆ.

 

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button