ವಿಶೇಷಸುದ್ದಿ

ಒನಕೆ ಓಬವ್ವ ರೂಪ ತಾಳಿದ ಡಿಕೆಶಿ ಪುತ್ರಿ

 ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ  ವೀರವನಿತೆ ಒನಕೆ ಓಬವ್ವನ ವೇಷ ಧರಿಸಿ  “ಹೆಣ್ಣು ಅಬಲೆಯಲ್ಲ, ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಆಕೆಗಿದೆ” ಎಂದು ಬರೆದುಕೊಂಡಿದ್ದಾರೆ.

ಧೈರ್ಯ, ಸಾಹಸದ ಮೂಲಕ ನಾರಿಶಕ್ತಿಯ ಪ್ರತೀಕವಾಗಿ ಒನಕೆ ಓಬವ್ವ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. ‘ಧೈರ್ಯಂ ಸರ್ವತ್ರ ಸಾಧನಂ.’ ಧೈರ್ಯ ಇದ್ದರೆ ಎಂತಹ ಸಮಸ್ಯೆ ಎದುರಾದರೂ ಜಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಒನಕೆ ಓಬವ್ವ ಅವರು ಇತಿಹಾಸ ಪುಟದಲ್ಲಿ ಅಜರಾಮರವಾಗಿದ್ದಾರೆ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಇತ್ತೀಚೆಗೆ ತಾವು ಯೂಟ್ಯೂಬ್‌ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ಬಗ್ಗೆ ಒನಕೆ ಓಬವ್ವನ ಬಗ್ಗೆ ಹೇಳಿಕೊಂಡಿದ್ದರು.

ನನ್ನ ಬಾಲ್ಯದ ರೋಲ್ ಮಾಡೆಲ್ ಒನಕೆ ಓಬವ್ವ, ನಾನು ಮೊದಲು 6 ನೇ ತರಗತಿಯಲ್ಲಿ ನಾಟಕವೊಂದರಲ್ಲಿ ಓಬವ್ವನ  ಪಾತ್ರಕ್ಕೆ ಬಣ್ಣ ಹಚ್ಚಿದ್ದೆ  ಐಕಾನಿಕ್ ವುಮೆನ್ ಪಾಡ್‌ಕ್ಯಾಸ್ಟ್ ಸೀಸನ್ 2ಗೆ  ಇತ್ತೀಚಿಗೆ ನೀಡಿದ ಸಂದರ್ಶನದ ಸಂಚಿಕೆಗಾಗಿ ಆ ಪ್ರಮುಖ ಕ್ಷಣವನ್ನು ಮರುಸೃಷ್ಟಿಸಲು ನಾನು ಗೌರವ ಮತ್ತು ಸ್ಫೂರ್ತಿ ಪಡೆದಿದ್ದೇನೆ. ಓಬವ್ವನ  ಸಾಂಪ್ರದಾಯಿಕ ಪರಂಪರೆಯನ್ನು ಗೌರವಿಸುವುದು ಮತ್ತು ನನ್ನ ಪ್ರಯಾಣಕ್ಕೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button