ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಇದ್ದು, ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿ ಬೋಗಸ್ ಗ್ಯಾರಂಟಿ ಮೂಲಕ 28 ಕ್ಕೆ 28 ಕ್ಷೇತ್ರಗಳನ್ನು ಕಳೆದುಕೊಳ್ಳಲಿದ್ದು, ಹೀನಾಯ ಪರಿಸ್ಥಿತಿಯಲ್ಲಿದ್ದಾರೆಂದು ಶಾಸಕರಾದ ಪ್ರಸಾದ್ ಅಬ್ಬಯ್ಯ ಕುಟುಕಿದರು.
ಹುಬ್ಬಳ್ಳಿಯ ಸಂತೋಷ್ ನಗರದಲ್ಲಿ ಕುಟುಂಬ ಸಮೇತ ಮತದಾನ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಬಿಜೆಪಿ ಆಡಳಿದ ವೈಫಲ್ಯಗಳು, ಸುಳ್ಳು ಭರವಸೆಗಳು ಅವರ ಗ್ಯಾರಂಟಿಗಳು ಕೂಡಾ ಫೇಕ್ ಆಗಿದ್ದು ಯಾವುದು ಯಶಸ್ಸು ಕಂಡಿಲ್ಲ. ಬೋಗಸ್ ಗ್ಯಾರಂಟಿ ಮೂಲಕ ದೇಶವನ್ನು ಅಭಿವೃದ್ಧಿ ಮಾಡುತ್ತೇವೆಂದು ಹೇಳಿ ಸುಳ್ಳು ಆಶ್ವಾಸನೆ ನೀಡಿದ್ದಾರೆ ಎಂದು ದೂರಿದ ಅವರು, ಕಾಂಗ್ರೆಸ್ ನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಈ ಮೂಲಕ ಜನರಿಗೆ ಅರ್ಥವಾಗಿದೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜೋಶಿಯವರ ಆಡಳಿತದ ವೈಫಲ್ಯದಿಂದಾಗಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಹೀಗಾಗಿ ಜನರು ಬದಲಾವಣೆ ಬಯಸಿದ್ದು, 20 ವರ್ಷ ಅವರ ಆಡಳಿತ ನೋಡಿ ಜನತೆ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು ಯುವಕರಾಗಿದ್ದು, ಯುವಕರ ಶಕ್ತಿಯಾಗಿ ತಮ್ಮದೇಯಾದ ಅಸ್ತಿತ್ವ ಕಟ್ಟಿ ಬೆಳಿಸಿಕೊಂಡಿದ್ದಾರೆ. ಖಂಡಿತವಾಗಿಯೂ ನಮ್ಮ ಅಭ್ಯರ್ಥಿ ಅಸೂಟಿ ಪರವಾಗಿ ಅಲೆಯಿದೆ. ಜತೆಗೆ ಕಾಂಗ್ರೆಸ್ ಗ್ಯಾರಂಟಿಗಳ ಮೂಲಕ ಆರ್ಥಿಕ ಸಂಕಷ್ಟದಿಂದ ಜನರು ಹೊರಬರುತ್ತಿದ್ದು, ಆರ್ಥಿಕ ಸಂಕಷ್ಟದಿಂದ ಜನರನ್ನು ಹೊರತರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಅನ್ನುವುದು ಜನತೆಗೆ ಗೊತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಜಿಲ್ಲೆಯ ನಮ್ಮೆಲ್ಲರ ಒಗ್ಗಟ್ಟು ಪ್ರತಿಫಲ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತವೆಂದು ವುಶ್ವಾಸ ವ್ಯಕ್ತಪಡಿಸಿದರು.