Freedom TV

ಮುದ್ರಾ ಯೋಜನೆ ಹೆಸ್ರಲ್ಲಿ ಮೋಸ: ಅರ್ಜಿದಾರರೇ ಹುಷಾರ್! ಹಣ ಬಂದಿದೆ ಅಂತೇಳಿ ಯಾಮಾರಿಸಿ ಹಣ ಕೀಳ್ತಾರೆ ಎಚ್ಚರ..!!

ಬೆಂಗಳೂರು :  ಮುದ್ರಾ ಯೋಜನೆಯಲ್ಲಿ ಲೋನ್ ಪಡೆಯಲು ಅನ್ಲೈನ್ ನಲ್ಲಿ ಸರ್ಚ್ ಮಾಡುವವರೇ ಎಚ್ಚರ. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಹೆಸರಲ್ಲಿ ಸಾಲ ನೀಡೋದಾಗಿ ಹೇಳಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಆರ್ ಬಿ ಐ ಹಾಗೂ ಮುದ್ರಾ ಯೋಜನೆಯ ನಕಲಿ ಲೆಟರ್ ಹೆಡ್ ಬಳಸಿ ವಂಚನೆ ಮಾಡಲಾಗಿದೆ. ಓರಿಜಿನಲ್ ಲೆಟರ್ ಹೆಡ್ ಗಳನ್ನೂ ಮೀರಿಸುವಂತೆ ನಕಲಿ ಲೆಟರ್ ಹೆಡ್ ತಯಾರಿಸಿಕೊಂಡು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ನಕಲಿ ಬಾಂಡ್ ಕಳಿಸಿ ಮೋಸ ಮಾಡಲಾಗುತ್ತಿದೆ.

2% ಬಡ್ಡಿಗೆ ಸಾಲ 10 ಲಕ್ಷ ಸಾಲ ನೀಡೋದಾಗಿ ಹೇಳಿ ವಂಚನೆ ಮಾಡಿದ್ದಾರೆ. ಈ ಕುರಿತಂತೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್ ಬಿ ಐ ನಿಂದ ಲೋನ್ ಸಾಂಕ್ಷನ್ ಆಗಿದೆ ಎಂದು ನಕಲಿ ಕನ್ಪರ್ ಮೆಷನ್ ಲೆಟರ್ ಕಳುಹಿಸಿದ್ದ ವಂಚಕರು, ಮೊದಲಿಗೆ ಫೀಸ್ ಎಂದು 10 ಸಾವಿರ ಹಣ ಹಾಕಿಸಿಕೊಂಡಿದ್ದರು. ಇದೀಗ ದೂರು ನೀಡಿರುವ ನಾರಾಯಣಸ್ವಾಮಿ ಎಂಬುವವರು ಬೈಕ್ ಮಾರಿ ಖದೀಮರ ಖಾತೆಗೆ ಹಣ ಹಾಕಿದ್ದರು. ಹಂತ ಹಂತವಾಗಿ ಹಣ ಪಡೆದು ನಂಬಿಕೆ ಬರಲಿ ಎಂದು ನಕಲಿ ಬಾಂಡ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ನಕಲಿ ಬಾಂಡ್ ಆರ್ ಬಿ ಐ ಹೆಸರಲ್ಲಿ ಬಂದಿದ್ದು, ಲೋನ್ ಸ್ಯಾಂಕ್ಷನ್ ಕಾಪಿ ಕೂಡ ನಕಲಿ ನೀಡಿದ್ರು. ಹತ್ತು ಸಾವಿರದ ಬಳಿಕ ದೊಡ್ಡ ಮೊತ್ತದ ಹಣ ಎಂದು ಮತ್ತೆ 25 ಸಾವಿರ ತೆರಿಗೆ ಕಟ್ಟಬೇಕು ಅಂತ ತಿಳಿಸಿದ್ರು. ಆ ಹಣ ಪಾವತಿ ಮಾಡುತ್ತಲೆ ಮುದ್ರಾ ಯೋಜನೆಯ ನಕಲಿ ಅಪ್ರೂವಲ್ ಫಾರ್ಮ್ ಕಳಿಸಿದ್ದಾರೆ.

ಮತ್ತೊಂದು ಸುತ್ತಿಗೆ ಖದೀಮರನ್ನ ನಂಬಿದ ನಾರಾಯಣಸ್ವಾಮಿ ಮತ್ತೆ 1 ಲಕ್ಷದ 63 ಸಾವಿರ ರೂಪಾಯಿ ಕಟ್ಟಿದ್ದಾರೆ. ಬಳಿ ಮತ್ತೆ ಹಣ ಹೇಳಿದಾಗ ಅನುಮಾನಗೊಂಡ ನಾರಾಯಣಸ್ವಾಮಿ ಬಾಂಡ್ ಗಳನ್ನು ತೆಗೆದುಕೊಂಡು ಹೋಗಿ ಸ್ಥಳೀಯ ಬ್ಯಾಂಕಿನಲ್ಲಿ ವಿಚಾರಣೆ ಮಾಡಿದಾಗ ಇದು ನಕಲಿ ಬಾಂಡ್ ಎನ್ನುವುದು ಗೊತ್ತಾಗಿದೆ. ಸಧ್ಯ ಹಣ ಕಳೆದುಕೊಂಡು ನಾರಾಯಣಸ್ವಾಮಿ ಹುಳಿಮಾವು ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button