ಬೆಂಗಳೂರು: ನಂದಿನಿ ತುಪ್ಪಕ್ಕೆ ಹೊರ ರಾಜ್ಯ, ಹೊರ ರಾಜ್ಯದಲ್ಲಿ ಭಾರೀ ಬೇಡಿಕೆ ಇದ್ದು, ಇದೀಗ ನಗರದಲ್ಲಿ ಕಲಬೆರಕೆ ದಂಧೆಯಲ್ಲಿ ನಂದಿನಿ ಬ್ರ್ಯಾಂಡ್ ಪ್ಯಾಕೆಟ್ ಬಳಸಿ ಕಲಬೆರಕೆ ತುಪ್ಪ ಮಾರಾಟ ಮಾಡ್ತಿದ್ದ ಜಾಲ ಪತ್ತೆಯಾಗಿದೆ. ಸಿಸಿಬಿ ಪೊಲೀಸರು, ಮತ್ತು ಕೆಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ಬೃಹತ್ ಜಾಲವನ್ನು ಪತ್ತೆ ಮಾಡಿದೆ..
ನಕಲಿ ತುಪ್ಪ ಶೇಖರಣೆ ಮಾಡ್ತಿದ್ದ ಬೆಂಗಳೂರಿನ ಚಾಮರಾಜಪೇಟೆಯ ಗೋಡೌನ್ ಮೇಲೆ ದಾಳಿ ನಡೆಸಿದ್ದಾರೆ. ಸ್ಕ್ಯಾಚೆಟ್ ಮತ್ತು ಪ್ಲ್ಯಾಸ್ಟಿಕ್ ಬಾಟಲ್ ನಲ್ಲಿ ತುಂಬಿ ನಗರದಾದ್ಯಂತ ಮಾರಾಟ ಮಾಡ್ತಿದ್ದ ಬೃಹತ್ ಜಾಲಾ ಪತ್ತೆವನ್ನು ಪೊಲೀಸರು ಭೇದಿಸಿದ್ದಾರೆ. ಬಳಿಕ ತುಪ್ಪದ ಮಾರಾಟ ಮಾಡುವ ಜಾಲ ರೂಪಿಸಿದ್ದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ, ದೀಪಕ್ಮು ನಿರಾಜು ಬಂಧಿತ ಆರೋಪಿಗಳಾಗಿದ್ದಾರೆ.
ಅರೆಸ್ಟ್ ಆಗಿರೋ ಮಹೇಂದ್ರ ಎಂಬಾತ ಕೆ.ಎಂ.ಎಫ್ ಡಿಸ್ಟ್ರಿಬ್ಯೂಟರ್ ಆಗಿದ್ದಾನೆ. ಕೆಎಂಎಫ್ನಲ್ಲೇ ಕೆಲಸ ಮಾಡ್ತಾ ವಂಚನೆ ಮಾಡಿದ್ದಾನೆ. ಮತ್ತೋರ್ವ ಆರೋಪಿ ದೀಪಕ್, ಮಹೇಂದ್ರ ಪುತ್ರನಾಗಿದ್ದಾನೆ. ಮುನಿರಾಜು ಎಂಬಾತ ತಮಿಳುನಾಡಿನಿಂದ ತುಪ್ಪವನ್ನ ಸಪ್ಲೈ ಮಾಡ್ತಿದ್ದ. ಅಭಿ ಅರಸು ಎಂಬುವವನು ತಮಿಳುನಾಡಿನಿಂದ ಬೆಂಗಳೂರಿಗೆ ತುಪ್ಪ ಕಳಿಸ್ತಿದ್ದ ಎನ್ನಲಾಗ್ತಿದೆ.
ಬೆಂಗಳೂರಿನಿಂದ ತಮಿಳುನಾಡಿಗೆ ಶುದ್ಧ ನಂದಿನಿ ತುಪ್ಪ ಪೂರೈಕೆ ಮಾಡುತ್ತಿದ್ದರು. ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಒರಿಜಿನಲ್ ತುಪ್ಪ ಖರೀದಿಸುತ್ತಿದ್ದರು. ಇಲ್ಲಿ ಖರೀದಿಸಿದ ಒರಿಜಿನಲ್ ತುಪ್ಪ ತಮಿಳುನಾಡಿಗೆ ಕಳುಹಿಸುತ್ತಿದ್ದರು. ಅದನ್ನ ತಮಿಳುನಾಡಿನಲ್ಲಿ ಕಲಬೆರಕೆ ಮಾಡುತ್ತಿದ್ದರು. ಒಂದು ಲೀಟರ್ ತುಪ್ಪಕ್ಕೆ 4 ಲೀಟರ್ ನಕಲಿ ತುಪ್ಪ ಬೆರೆಸುತ್ತಿದ್ದರು. ಫಾರ್ಮ್ ಆಯಿಲ್, ತೆಂಗಿನ ಎಣ್ಣೆ ಮತ್ತು ಡಾಲ್ಡಾ ಬೆರೆಸುತ್ತಿದ್ದರು. ಅದನ್ನ ಮತ್ತೆ ಕರ್ನಾಟಕಕ್ಕೆ ತಂದು ಮಾರಾಟ ಮಾಡುತ್ತಿದ್ದರು.
ಇದೇ ವಿಚಾರಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಕೆಎಂಎಫ್ ಜಾಗೃತ ದಳ ಕಡೆಯಿಂದ ನಮಗೆ ಮಾಹಿತಿ ಬಂದಿತ್ತು. ಜಂಟಿಯಾಗಿ ಈ ಪ್ರಕರಣ ಪತ್ತೆ ಮಾಡಿದ್ದೇವೆ. ಮೂರು ಜನರನ್ನು ನಾವು ಅರೆಸ್ಟ್ ಮಾಡಿದ್ದೇವೆ. ಒಬ್ಬನಿಗೆ ಪ್ರಶ್ನೆ ಮಾಡಿದ್ದೇವೆ. ನಂದಿನಿ ತುಪ್ಪ, ಹಾಲಿನ ಉತ್ಪನ್ನಗಳನ್ನ ನಕಲಿ ಮಾಡುತ್ತಿರುವುದು ಗೊತ್ತಾಗಿದೆ ಎಂದರು.
ಇನ್ನು ಕೆಎಂಎಫ್ ಎಂ.ಡಿ ಶಿವಸ್ವಾಮಿ ಪ್ರತಿಕ್ರಿಯಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿ ಕೆಎಂಎಫ್ ಡೀಲರ್ ಅಂತ ಗೊತ್ತಾಗಿದೆ. ಅಧಿಕೃತವಾಗಿ ಕೊಡುತ್ತಿದ್ದ ತುಪ್ಪ ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಫಾರ್ಮ್ ಆಯಿಲ್ ಹಾಗೂ ತೆಂಗಿನ ಎಣ್ಣೆ ಮಿಕ್ಸ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಅಧಿಕೃತ ಔಟ್ಲೆಟ್ನಲ್ಲಿ ಮಾರಾಟದ ಬಗ್ಗೆ ತನಿಖೆ ಮಾಡುತ್ತೇವೆ. ಇದು ಫೇಕ್ ನಂದಿನಿ ತುಪ್ಪ ಅಂತ ವಿಜಿಲೆನ್ಸ್ ತಂಡದ ಮೂಲಕ ಗೊತ್ತಾಗಿತ್ತು. ಗ್ರಾಹಕರಿಗೆ ತೊಂದರೆ ಆಗಬಾರದು ಅಂತ ಸಿಸಿಬಿ ಜೊತೆ ಸೇರಿ ದಾಳಿ ಮಾಡಿದ್ದೇವೆ. ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ನಂದಿನಿ ನಿಜವಾಗಲೂ ಶುದ್ಧವಾದ ತುಪ್ಪವನ್ನು ಸಪ್ಲೈ ಮಾಡುತ್ತೆ ಎಂದು ಹೇಳಿದ್ದಾರೆ


