ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಸಹ-ಪ್ರಭಾರಿಯೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರೊಂದಿಗೆ ಚಂಪೈ ಸೋಮವಾರ ತಡರಾತ್ರಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾದ ನಂತರ ಈ ನಿರ್ಧಾರ ಪ್ರಕಟವಾಗಿದೆ.
ಪ್ರಸ್ತುತ ಹೇಮಂತ್ ಸೊರೆನ್ ಕ್ಯಾಬಿನೆಟ್‌ನಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಚಂಪೈ ಅವರು ಇನ್ನೂ ಜೆಎಂಎಂ ಪಕ್ಷ ಮತ್ತು ಸರ್ಕಾರ ಎರಡಕ್ಕೂ ರಾಜೀನಾಮೆ ನೀಡಿಲ್ಲ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ (Hemant Soren) ಭೂ ಹಗರಣ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾಗ ಚಂಪೈ ಸೋರೆನ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿದ್ದ (Jail) ಹೇಮಂತ್ ಸೊರೇನ್ ಜೂನ್ 28ರಂದು ಬಿಡುಗಡೆಯಾಗಿದ್ದರು. ಇದಾದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜ್ಯದ ಅಧಿಕಾರವನ್ನು ಮರಳಿ ವಹಿಸಿಕೊಂಡರು. ಅಧಿಕಾರದಿಂದ ಕೆಳಗಡೆ ಇಳಿಸಿದ ಬಳಿಕ ಚಂಪೈ ಸೊರೆನ್ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
ಚಂಪೈ ಸೊರೆನ್ ಅವರು ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಜೆಎಂಎಂನ ಹಿರಿಯ ನಾಯಕರಾಗಿರುವ ಚಂಪೈ ಸೊರೆನ್ ಏಳು ಬಾರಿ ಶಾಸಕರಾಗಿದ್ದಾರೆ.