ವರ್ಲ್ಡ್ ಕಪ್ ಲೀಗ್ ಗೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿ ಗೆದ್ದೇ ತೀರಬೇಕೆಂದು ಆರ್ ಸಿಬಿ ಫುಲ್ ಟ್ರೈ ಮಾಡ್ತಿದೆ. ಸೀಸನ್-18ರಲ್ಲಿ ಕಪ್ ಗೆಲ್ಲೋಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆರೆ ಮರೆಯಲ್ಲೇ ಕಸರತ್ತು ನಡೆಸಿದೆ. ಬೆಂಗಳೂರಿನಲ್ಲಿ ಪ್ರೇಪೇರ್ ಆಗ್ತಿರೋ ಆರ್ಸಿಬಿ, 18 ವರ್ಷಗಳ ಕನಸು ನನಸು ಮಾಡಿಕೊಳ್ಳಲು ಮುಂದಾಗಿದೆ ಟ್ರೋಫಿ ಗೆಲುವಿನ ಕನಸು ನನಸಾಗಬೇಕಾದ್ರೆ, ಆ ಮೂವರ ರೋಲ್ ಮೋಸ್ಟ್ ಇಂಪಾರ್ಟೆಂಟ್. ಪ್ರಮುಖವಾಗಿ ವಿರಾಟ್ ಕೊಹ್ಲಿ ಪಾತ್ರ ಪ್ರಮುಖವಾಗಿದೆ. ಉಳಿದಂತೆ ರಜತ್ ಪಾಟೀದಾರ್ ಮತ್ತು ದಿನೇಶ್ ಕಾರ್ತಿಕ್ ತಂಡವನ್ನು ಲೀಡ್ ಮಾಡೋ ವಿಚಾರದಲ್ಲಿ ಬೆನ್ನಿಗೆ ನಿಲ್ಲಬೇಕಿದೆ.
ಅಷ್ಟೇ ಅಲ್ಲ, ಆನ್ಫೀಲ್ಡ್ನಲ್ಲಿ ಆ್ಯಕ್ಟೀವ್ ಆಗಿರುವ ಕೊಹ್ಲಿ, ಸಹ ಆಟಗಾರರ ಪಾಲಿಗೆ ಮೋಟಿವೇಟರ್ ಆಗಬೇಕು. ತಾನೂ ಆಡುತ್ತಾ ಇತರೆ ಆಟಗಾರರ ಆತ್ಮವಿಶ್ವಾಸ ತುಂಬುವ ಕೆಲಸ ಕೊಹ್ಲಿಯಿಂದ ಬರಬೇಕು. ಇಲ್ಲ ಆರ್ಸಿಬಿ ದಯನೀಯ ಸ್ಥಿತಿ ತಲುಪೋದು ಗ್ಯಾರಂಟಿ. ಹೀಗಾಗಿ ಆರ್ಸಿಬಿ ತಂಡದಲ್ಲಿ ಗೆಲುವಿನ ಕನಸು ಹುಟ್ಟುಹಾಕಿದೆ.
ಆರ್ಸಿಬಿಯ ಬ್ಯಾಟಿಂಗ್ ಕೋಚ್ ಆಗಿರುವ ದಿನೇಶ್, ರೋಲ್ ನಿಜಕ್ಕೂ ಕ್ರೂಶಿಯಲ್. ಹೊಸ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿರುವ ದಿನೇಶ್ ಕಾರ್ತಿಕ್, ದೇಶಿ ಆಟಗಾರರ ಜೊತೆ ಜೊತೆಗೆ ಓವರ್ಸೀಸ್ ಪ್ಲೇಯರ್ಗಳ ಜೊತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಬೇಕು. ಟಿ20 ಗೇಮ್ ಬಗ್ಗೆ ಚೆನ್ನಾಗಿ ಅರಿತಿರುವ ದಿನೇಶ್ ಕಾರ್ತಿಕ್, ಪ್ರತಿ ಪಿಚ್ ಕಂಡೀಷನ್ಸ್ ಅನುಭವನ್ನು ಆಟಗಾರರಿಗೆ ಧಾರೆ ಎಳೆಯಬೇಕು. ಇದೆಲ್ಲಕ್ಕಿಂತ ಮಿಗಿಲಾಗಿ ಕೋರ್ ಟೀಮ್ ಕಟ್ಟಬೇಕು. ಆಟಗಾರನ ಸಾಮರ್ಥ್ಯಕ್ಕೆ ತಕ್ಕ ರೋಲ್ ನೀಡಬೇಕು. ಪ್ರದರ್ಶನವನ್ನು ಹೊರ ತರಬೇಕು. ಇಲ್ಲ ಸಂಕಷ್ಟ ತಪ್ಪಿದಿಲ್ಲ
ವಿರಾಟ್ ಕೊಹ್ಲಿ. ದಿನೇಶ್ ಕಾರ್ತಿಕ್ ಮಾತ್ರವಲ್ಲ. ಮೋಸ್ಟ್ ಕ್ರೂಶಿಯಲ್ ರೋಲ್ ಪ್ಲೇ ಮಾಡಬೇಕಿರುವುದೇ ನ್ಯೂ ಕ್ಯಾಪ್ಟನ್ ರಜತ್ ಪಾಟಿದಾರ್. ಯಾಕಂದ್ರೆ, ಥಿಂಕ್ ಟ್ಯಾಂಕ್ಗಳ ಸಲಹೆ ಸೂಚನೆಯನ್ನು ಆನ್ಫೀಲ್ಡ್ನಲ್ಲಿ ಇಂರ್ಪಿಮೆಂಟ್ ಮಾಡಬೇಕಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಈ ಗೇಮ್ನ ಸರಿಯಾಗಿ ರೀಡ್ ಮಾಡೋದ್ರ ಜೊತೆಗೆ ಸರಿಯಾದ ಕಾರ್ಯತಂತ್ರ ರೂಪಿಸಬೇಕಿದೆ.
ಇದೆಲ್ಲಕ್ಕಿಂತ ಹೆಚ್ಚಾಹಿ ಸ್ಟಾರ್ ಆಟಗಾರರನ್ನ ಡೀಲ್ ಮಾಡುವ ಜಾಣ್ಮೆ ಕಲಿಯಬೇಕಿದೆ. ಅಷ್ಟೇ ಅಲ್ಲ. ನಾಯಕತ್ವದ ಒತ್ತಡದ ಜೊತೆ ಬ್ಯಾಟಿಂಗ್ನಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟಬೇಕು. ಇಲ್ಲ ಆರ್ಸಿಬಿ ಮತ್ತೊಂದು ಆಧ್ಯಾಯದಲ್ಲೂ ಸೋಲಿನ ಅಂತ್ಯವೇ ಆಗೋದು ಕನ್ಫರ್ಮ್. ಇವರ ಜೊತೆಗೆ ಪ್ರತಿ ಆಟಗಾರನೂ ಗೆಲುವಿಗಾಗಿ ಶ್ರಮಿಸಬೇಕು. ಇದಕ್ಕಾಗಿ ಅವರವರ ರೋಲ್ನ ಸಮರ್ಥವಾಗಿ ನಿಭಾಯಿಸಬೇಕು. ಆಗಷ್ಟೇ ಆರ್ಸಿಬಿ ಕಪ್ ಗೆಲುವಿನ ಕನಸು ನನಸಾಗಲು ಸಾಧ್ಯ. ಇಲ್ಲ ಹಿಂದಿನ ಸೀಸನ್ ಕಥೆಯೇ ಸೀಸನ್-18 ಆಗೋದ್ರಲ್ಲಿಅನುಮಾನವೇ ಇಲ್ಲ.