ಜಿಲ್ಲೆ

ಕೋರ್ಟ್​ ಮುಂದೆ ಶರಣಾದ ಆಹಾರ ಕಳ್ಳಿ

ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಅಂಗನವಾಡಿ ಪೌಷ್ಟಿಕ ಆಹಾರದ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಕೊನೆಗೂ ಅವಳಿನಗರದ ಪೊಲೀಸ್ ಕಣ್ಣು ತಪ್ಪಿಸಿ  ಬೈತುಲ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯದಿಂದ ಹೊರ ಬರುತ್ತಿದಂತೆ ನನ್ನನ್ನು ಜೈಲಿಗೆ ಕಳಹಿಸಲು ಬಹಳ ದೊಡ್ಡ ಷಡ್ಯಂತರ ನಡೆದಿದೆ. ಇದರ ಹಿಂದೆ ದೊಡ್ಡವರ ಕೈವಾಡವಿದೆ ಎಂದು ಪ್ರಕರಣದ ಪ್ರಮುಖ ಆರೋಪಿ ಬೈತುಲ್ ಕಿಲೇದಾರ ಹೈಡ್ರಾಮ ಸೃಷ್ಟಿ ಮಾಡಿದ್ದಾರೆ.ನನ್ನನ್ನು ಜೈಲಿಗೆ ಹಾಕಿಸಲು ದೊಡ್ಡವರ ಕೈವಾಡವಿದೆ. ನಮ್ಮವರೇ ನನ್ನನ್ನು ಬಲಿಪಶು ಮಾಡಿದ್ದಾರೆ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಕೈ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಶಶಿಕುಮಾರ್ ಸರ್ ಹೆಸರಿಗೂ ಕೆಟ್ಟ ಹೆಸರು ಬಂದಿದೆ ಎಂದರು.

ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಗೆ ವಿತರಿಸಬೇಕಾದ ಆಹಾರ ಪದಾರ್ಥಗಳ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾಳೆ.

ಆರೋಪಿ ಬೈತುಲ್ ಕಿಲ್ಲೆದಾರ್ ಶರಣಾಗಿದ್ದಾಳೆ. ನ್ಯಾಯಲಯ ಆರೋಪಿಗೆ 14ದಿನ ನ್ಯಾಯಾಂಗ ವಿಧಿಸಿ, ಧಾರವಾಡ ಜೈಲಿಗೆ ಕಳಿಸಿದೆ.

ಇನ್ನು ನ್ಯಾಯಾಲಯದಿಂದ ಹೊರಬರಿತ್ತಿದ್ದಂತೆ ಆರೋಪಿ ಹೈಡ್ರಾಮಾ ಮಾಡಿದ್ದಾಳೆ. ನನ್ನನ್ನು ಜೈಲಿಗೆ ಹಾಕಿಸಲು ದೊಡ್ಡವರ ಕೈವಾಡವಿದೆ. ನಮ್ಮವರೇ ನನ್ನನ್ನು ಬಲಿಪಶು ಮಾಡಿದ್ದಾರೆ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಕೈ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button