ಚಿತ್ರದುರ್ಗ: ಚಿತ್ರದುರ್ಗದ ಕಾರಾಗೃಹ ರಸ್ತೆಯ ಪಾಳು ಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದ್ದು, ಹಿಂದೆ ಈ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಸೇರಿದಂತೆ ಐವರು ವಾಸವಿದ್ದರು ಎನ್ನಲಾಗಿದೆ. ನಿವತ್ತ ಇಂಜಿನಿಯರ್ ದೊಡ್ಡ ಸಿದ್ದವ್ವನ ಹಳ್ಳಿ ಮೂಲದವರೆನ್ನಲಾಗಿದ ನಿವೃತ್ತ ಲೋಕೋಪಯೋಗಿ ಇಲಾಖೆ ಜಗನ್ನಾಥ ರೆಡ್ಡಿ. ಇವರು ನಿವೃತ್ತರಾಗಿ ಮೂವತ್ತು ವರ್ಷವಾಗಿತ್ತಂತೆ. ಮನೆಯಲ್ಲಿ ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ, ಮಗಳು ತ್ರಿವೇಣಿ ಇದ್ದರು. ಈ ಸಂಬಂಧ ಸಂಬಂಧಿಕ ಪವನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಜಗನ್ನಾಥ ರೆಡ್ಡಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾರೊಂದಿಗೂ ಸಂಪರ್ಕವಿರಲಿಲ್ಲ ಎನ್ನಲಾಗಿದೆ.
ಗುರುವಾರ ರಾತ್ರಿ ಪರಿಶೀಲಿಸಿದ್ದ ಪೊಲೀಸರು ಮೂರು ಅಸ್ಥಿಪಂಜರ ದೊರೆತಿವೆ ಎಂದು ತಿಳಿಸಿದ್ದರು. ಆದರೆ ಬೆಳಗ್ಗೆ ಐದು ಅಸ್ತಿ ಪಂಜರ ಪತ್ತೆಯಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳ ಪರಿಶೀಲಿಸಿ, ದಾವಣಗೆರೆಗೆ ಪ್ರಯೋಗಾಲಯಕ್ಕೆ ಅಸ್ಥಿ ಪಂಜರ ಸಂಗ್ರಹಿಸಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಮತ್ತಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಅಸ್ಥಿ ಪಂಜರಗಳ ಸ್ಥಿತಿಯಲ್ಲಿ ಐದು ಮೃತ ದೇಹಗಳ ಸಿಕ್ಕಿರುವ ಘಟನೆ ಚಿತ್ರದುರ್ಗದ ಜೈಲು ರಸ್ತೆಯಲ್ಲಿರುವ ಪಾಳು ಮನೆಯೊಂದರಲ್ಲಿ ಕಂಡು ಬಂದಿದ್ದು,ಜೊತೆಗೆ ಡೆತ್ ನೋಟ್ ಕೂಡ ಇದ್ದು, ಇದರಲ್ಲಿ ಮನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದು, ಜನರಲ್ಲಿ ಕುತೂಹಲ ಮೂಢಿಸಿದೆ. ಇಷ್ಟಕ್ಕೂ ಅಸ್ಥಿ ಪಂಜರದ ಸುತ್ತ ಹೆಣೆದುಕೊಂಡಿರುವ ಸತ್ಯವಾದ್ರೂ ಏನು..?
ಚಿತ್ರದುರ್ಗ ನಗರದ ಜೈಲು ರಸ್ತೆಯಲ್ಲಿರುವ ಪಾಳು ಮನೆಯ ಗೋಡೆ ಮೇಲೆ ಪಿಡಬ್ಲ್ಯೂಡಿ ಇಲಾಖೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಮನೆಯಲ್ಲಿ ಐದು ಅಸ್ಥಿ ಪಂಜಿರಗಳು ಸಿಕ್ಕಿವೆ. ಸುಮಾರು 2019 ರ ಸೆಪ್ಟೆಂಬರ್ ನಿಂದ ಇಲ್ಲಿಯವರೆಗೂ ಪಾಳು ಬಿದ್ದ ಮನೆಯಲ್ಲಿಯೇ ಮೃತ ದೇಹಗಳು ಕೊಳೆತು ಅಸ್ಥಿ ಪಂಜಿರಗಳಾಗಿವೆ. ಕೊಳೆತ ವಾಸನೆ ಬಂದರೂ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ ರಾತ್ರಿ ಪೊಲೀಸರು ಸ್ಥಳೀಯರ ಕರೆಯ ಮೇರೆಗೆ ಬಾಗಿಲು ಹೊಡೆದು ವಿಧಿ ವಿಜ್ಞಾನ ಪ್ರಯೋಗಾಲಯದ ಡೆಪ್ಯೂಟಿ ಡೈರೆಕ್ಟರ್ ಛಾಯಾಕುಮಾರಿ ನೇತೃತ್ವದಲ್ಲಿ ಮನೆಯೊಳಗೆ ಹೋದಾಗ ಅಲ್ಲಿ ಐದು ಅಸ್ಥಿ ಪಂಜಿರಗಳಿವೆ ಎಂದು ತಿಳಿದುಬಂದಿದೆ. ಒದರ ಬಗ್ಗೆ ಸಹೋದರ ಸಂಬಂಧಿ ತಿಮ್ಮಾರೆಡ್ಡಿ ಎನ್ನುವವರು ಸಾವಿನ ಬಗ್ಗೆ ಶಂಕೆ ಇದೆ ತನಿಖೆ ನಡೆಸಬೇಕು ಎಂದು ದೂರು ನೀಡಲಾಗಿದ್ದು, ಬಡಾವಣೆ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.