ಚಿಕ್ಕಮಗಳೂರು: ಪ್ರವಾಸಕ್ಕೆ ಎಂದು ಬಂದಿದ್ದ ಶಾಲಾ ಮಕ್ಕಳಿದ್ದ ವಾಹನ ಪಲ್ಟಿಯಾಗಿ ಐವರು ಮಕ್ಕಳು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್‌ನ ಬಳಿ ನಡೆದಿದೆ.

ಮೈಸೂರಿನ ಖಾಸಗಿ ಶಾಲೆಯೊಂದರ ಮಕ್ಕಳು ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಎಂದು ಬಂದಿದ್ದರು. ವಿದ್ಯಾರ್ಥಿಗಳು ಸರ್ಕಾರಿ ಬಸ್‍ನಲ್ಲಿ ಚಿಕ್ಕಮಗಳೂರಿಗೆ ಬಂದು, ಅಲ್ಲಿಂದ ಮುಳ್ಳಯ್ಯನಗಿರಿಗೆ ಟ್ರ್ಯಾಕ್ಸ್ ಮಾಡಿಸಿಕೊಂಡು ಹೊರಟಿದ್ರು. ಈ ವೇಳೆ, ಕೈಮರದ ಬಳಿ ಟ್ರ್ಯಾಕ್ಸ್‌ನ ಟೈರ್ ಸ್ಫೋಟಗೊಂಡಿದೆ. ವಾಹನ ಪಲ್ಟಿಯಾದ ಪರಿಣಾಮ 12 ಮಕ್ಕಳಲ್ಲಿ 5 ಮಕ್ಕಳು ಗಾಯಗೊಂಡಿದ್ದಾರೆ.

ಇನ್ನು ವಾಹನ ಪಲ್ಟಿಯಾದ ಬಳಿಕ ಮಕ್ಕಳನ್ನ ಬೇರೆ ವಾಹನದಲ್ಲಿ ಕರೆದುಕೊಂಡು ಹೋಗಲಾಗಿದೆ. ಮುಳ್ಳಯ್ಯನಗಿರಿಯ ಎತ್ತರದ ಪ್ರದೇಶದಲ್ಲಿ ಈ ಘಟನೆಯಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಕೆಳಗೆ ಈ ಅವಘಡ ಸಂಭವಿಸಿದ್ದು, ದುರ್ಘಟನೆಯೊಂದು ತಪ್ಪಿದಂತಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights