Thursday, December 11, 2025
23.9 C
Bengaluru
Google search engine
LIVE
ಮನೆಜಿಲ್ಲೆನಮ್ಮ ಮೆಟ್ರೋ: ಪಿಂಕ್ ಲೈನ್‌ಗೆ ಮೊದಲ ಚಾಲಕರಹಿತ ರೈಲು ಅನಾವರಣ

ನಮ್ಮ ಮೆಟ್ರೋ: ಪಿಂಕ್ ಲೈನ್‌ಗೆ ಮೊದಲ ಚಾಲಕರಹಿತ ರೈಲು ಅನಾವರಣ

ಬೆಂಗಳೂರು: ಬಿಎಂಆರ್​ಸಿಎಲ್​​​ ಕಾರಿಡಾರ್​​​ಗಳಿಗಾಗಿ ಅಭಿವೃದ್ಧಿಪಡಿಸಲಾದ ಚಾಲಕ ರಹಿತ ರೈಲುಗಳ ಮಾದರಿಯನ್ನು ಇಂದು ಬಿಎಂಆರ್​ಸಿಎಲ್​ ಆನಾವರಣಗೊಳಿಸಿದೆ.. ನಮ್ಮ ಮೆಟ್ರೋದ ಪಿಂಕ್​ ಲೈನ್​​​​​​ ಯೋಜನೆಯು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ..

ಪಿಂಕ್ ಲೈನ್‌ನ ಮೂಲಮಾದರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಜೆ ರವಿಶಂಕರ್ ಅವರು ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಿದರು. ಬಳಿಕ BEML ರೈಲು ಸಂಕೀರ್ಣದಲ್ಲಿ ರೈಲಿನ ಯಶಸ್ವಿ ಪರೀಕ್ಷಾರ್ಥ ಓಟ ನಡೆಸಿತು.

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ 21 ಕಿ.ಮೀ ಮಾರ್ಗದಲ್ಲಿ ಸಂಚರಿಸಲಿರುವ ಮೊದಲ ಆರು ಬೋಗಿಗಳ ರೈಲು ಇಂದು ಅನಾವರಣಗೊಂಡಿದೆ. ಈ ಭಾಗದಲ್ಲಿ ಮೊದಲ ಹಂತವಾಗಿ ಐದು ಹೊಸ ಚಾಲಕರಹಿತ ರೈಲುಗಳನ್ನ ಓಡಿಸಲು ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಹೊಸ ರೈಲು ಮಾದರಿಯನ್ನ ಅನಾವರಣಗೊಳಿಸಿದ್ದು, ಡಿ.15ರ ನಂತರ ರೈಲುಗಳು ಕೊತ್ತನೂರು ಡಿಪೋಗೆ ಹೋಗಿ ಹಲವು ಪರೀಕ್ಷೆಗಳನ್ನ ಎದುರಿಸಲಿವೆ.

ಭಾರತೀಯ ಸಾರ್ವಜನಿಕ ವಲಯದ ಉದ್ದಿಮೆ ಬಿಇಎಂಎಲ್, ಈ ರೈಲನ್ನು ತಯಾರಿಸಿದ್ದು, ಒಟ್ಟು 3,177 ಕೋಟಿ ರೂಪಾಯಿ ವೆಚ್ಚದ ಒಪ್ಪಂದದಡಿ ಇದನ್ನು ಪೂರೈಸಲಾಗಿದೆ. ವಿಶೇಷವೆಂದರೆ, ಈ ರೈಲುಗಳು ಚಾಲಕರಹಿತ ತಂತ್ರಜ್ಞಾನವನ್ನು ಹೊಂದಿವೆ. ಆರಂಭಿಕ ಹಂತದಲ್ಲಿ ಚಾಲಕರ ನೆರವಿನೊಂದಿಗೆ ಸೆಮಿ-ಆಟೋಮ್ಯಾಟಿಕ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ರೈಲುಗಳು, ಭವಿಷ್ಯದಲ್ಲಿ ಸಂಪೂರ್ಣ ಚಾಲಕರಹಿತ ವ್ಯವಸ್ಥೆಗೆ ಬದಲಾಗುವ ಸಾಮರ್ಥ್ಯ ಹೊಂದಿವೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments