ಕೇರಳ: ರಾಜ್ಯದ ಕಾಸರಗೋಡಿನಲ್ಲಿ ಭಾರಿ ಪಾಟಾಕಿ ಅವಘಡ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ಸೋಮವಾರ ಮಧ್ಯರಾತ್ರಿ ವೀರನಾರ್ಕವ್ ದೇವಸ್ಥಾನದಲ್ಲಿ ತೆಯ್ಯಂಕೆಟ್ಟು ಮಹೋತ್ಸವ ನಡೆಯುತ್ತಿತ್ತು. ಉತ್ಸವದ ವೇಳೆ ಪಟಾಕಿ ಸಿಡಿಸುವಾಗ, ಅಲ್ಲೇ ಇದ್ದ ಪಟಾಕಿ ಗೋದಾಮಿಗೆ ಬೆಂಕಿ ತಗುಲಿದೆ. ಪಟಾಕಿಗಳು ಬಾಂಬ್ ರೀತಿ ಸಿಡಿದಿವೆ. ಉತ್ಸವದಲ್ಲಿ ಸೇರಿದ್ದ ಜನರ ಮೇಲೆ ಪಟಾಕಿ ಕಿಡಿ ಸಿಡಿದಿದೆ. ಕೆಲವರ ಮೈಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ನೀಲೇಶ್ವರಂ, ಕಾಞಂಗಾಡು ಮತ್ತು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟದ ತೀವ್ರತೆಯಿಂದ ಗೋದಾಮಿನ ಗೋಡೆಗಳು ಛಿದ್ರಗೊಂಡಿವೆ.
ಕೇರಳದ ಕಾಸರಗೋಡಿನಲ್ಲಿ ಉತ್ಸವದ ವೇಳೆ ಪಟಾಕಿ ಅವಘಡ: ಭಯಾನಕ ವಿಡಿಯೋ ಇಲ್ಲಿದೆ
RELATED ARTICLES