ಕಲಬುರಗಿ ನಗರದಲ್ಲಿ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ ಪ್ರಕರಣ ಸಂಭವಿಸಿದ್ದು, ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡದ್ದಕ್ಕೆ ಶೋರೂಂಗೆ ಬೆಂಕಿಯಿಟ್ಟಿರುವ ಸಂಗತಿ ತಳಿದು ಬಂದಿದೆ. ಕಲಬುರಗಿ ನಗರದ ಹುಮನಬಾದ್ ಬೇಸ್ ನಲ್ಲಿರೋ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಈ ಘಟನೆ ನಡೆದಿದ್ದು, ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಆಗಿಲ್ಲವೆಂದು ಸಿಬ್ಬಂದಿಗಳ ಜೊತೆ ವಾಗ್ವಾದ ನಡೆದು, ಈ ವೇಳೆ ರೊಚ್ಚಿಗೆದ್ದು ಶೋರೂಂ ತುಂಬೆಲ್ಲ ಪೆಟ್ರೋಲ್ ಚೆಲ್ಲಿದ ಮಹ್ಮದ್ ನದೀಮ್. ಪೆಟ್ರೋಲ್ ಚೆಲ್ಲಿ ನೋಡು ನೋಡ್ತಿದ್ದಂಗೆ ಬೆಂಕಿಯಿಟ್ಟಿದ್ದಾನೆ, ಬೆಂಕಿ ಅವಗಢದಲ್ಲಿ ನಾಲ್ಕೈದು ಬೈಕ್, ಬೈಕ್ ಸ್ಪೇರ್‌ಪಾರ್ಟ್ಸ್, ಪೀಠೋಪಕರಣಗಳು, ಸಿಸಿ ಕ್ಯಾಮರಾ ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಭಸ್ಮವಾಗಿದೆ. ಬೆಂಕಿಯಿಟ್ಟ ಆರೋಪಿ ಮಹ್ಮದ್ ನದೀಮ್‌ನನ್ನ ಚೌಕ್ ಠಾಣೆ ಪೊಲೀಸರು ಬಂಧಿಸಿದ್ಧಾರೆ…