ಗದಗ: ಮಗನಿಗೆ ಕೆಲಸ ಕೊಡುವಂತೆ ಮೈಗೆ ಮಲ ಬಳಿದುಕೊಂಡು ಪುರಸಭೆ ಎದುರು ವ್ಯಕ್ತಿಯೊಬ್ಬ ವಿಚಿತ್ರವಾಗಿ ಪ್ರತಿಭಟನೆ ನಡೆಸಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪುರಸಭೆ ಆವರಣದಲ್ಲಿ ನೆಡೆದಿದೆ.
ಸುರೇಶ್ ಬಸವನಾಯಕ್ ಎಂಬಾತ ಧರಣಿ ಸತ್ಯಾಗ್ರಹ ಮಾಡಿದ್ದು, ಪುರಸಭೆಯಲ್ಲಿ ಮಗನಿಗೆ ಕೆಲಸ ಕೊಡುವಂತೆ ಪಟ್ಟು ಹಿಡಿದಿದ್ದಾನೆ. ಇದಕ್ಕಾಗಿ ಮೈಗೆ ಮಲ ಬಳಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
40 ವರ್ಷಗಳಿಂದ ಪುರಸಭೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಈಗ ಮಗನಿಗೆ ಕೆಲಸ ಕೊಡಿ ಎಂದು ಸುರೇಶ್ ಆಗ್ರಹಿಸಿದ್ದಾನೆ. ಈ ವೇಳೆ ಪುರಸಭೆಯವರು ಮ್ಯಾನ್ ಫವರ್ ಏಜೆನ್ಸಿ ಮೂಲಕ ಅರ್ಜಿ ಹಾಕುವಂತೆ ಹೇಳಿದ್ದಾರೆ. ಆದರೆ ಪಟ್ಟು ಬಿಡದ ಸುರೇಶ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ವಿನೂತನ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ಹೊತ್ತಿನ ಬಳಿಕ ಪೊಲೀಸರು ಸುರೇಶ್ನನ್ನು ಸಮಾಧಾನ ಮಾಡಿ ಅಲ್ಲಿಂದ ಕಳುಹಿಸಿದ್ದಾರೆ.


