ಕೋಲಾರದ ಖ್ಯಾತ ಬಾಡಿ ಬಿಲ್ಡರ್ ಸುರೇಶ್ ಬಾಬು ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೋಲಾರದ ಗಾಂಧಿನಗರದ ಚಲಪತಿ, ಮುನಿಯಮ್ಮ ದಂಪತಿ ಪುತ್ರನಾದ ಸುರೇಶ್ ಕುಮಾರ್ (42) ಕಾರು ಅಪಘಾತದಲ್ಲಿ ಜೀವ ಕಳೆದುಕೊಂಡವರು. ಬಾಡಿ ಬಿಲ್ಡರ್ ಆಗಿದ್ದ ಸುರೇಶ್ ಕುಮಾರ್ ಅವರು ಅಮೆರಿಕದ ಫ್ಲೋರಿಡಾ ಹಾಗೂ ಟೆಕ್ಸಾಸ್ ನಗರದ ಮಧ್ಯೆ ಕಾರಿನಲ್ಲಿ ಕೆಲಸದ ನಿಮಿತ್ತ ತೆರಳುತ್ತಿದ್ದರು. ಇದೇ ವೇಳೆ ಭೀಕರವಾದ ರಸ್ತೆ ಅಪಘಾತ ಸಂಭವಿಸಿ ಸುರೇಶ್ ಬಾಬು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಸುರೇಶ್ ಕುಮಾರ್ ಬಾಡಿ ಬಿಲ್ಡರ್ ಜೊತೆಗೆ ಮಾಡೆಲಿಂಗ್ನಲ್ಲೂ ಗುರುತಿಸಿಕೊಂಡಿದ್ದರು. ಇಷ್ಟೇ ಅಲ್ಲದೇ, ಫ್ಲೋರಿಡಾದಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದರು. ಸ್ಯಾಂಡಲ್ವುಡ್ನ ಖ್ಯಾತ ಸಿನಿಮಾ ನಟ, ನಟಿಯರಿಗೆ ದೈಹಿಕ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ವಿವಾವಾಗಿದ್ದರು. ಇತ್ತೀಚೆಗಷ್ಟೇ ಕೋಲಾರಕ್ಕೆ ಬಂದು ಪತ್ನಿ ಹಾಗೂ ಮಕ್ಕಳನ್ನು ಜೊತೆಯಲ್ಲೇ ಯುಎಸ್ಗೆ ಕರೆದುಕೊಂಡು ಹೋಗಿದ್ದರು. ಇದರ ಬೆನ್ನಲ್ಲೇ ಸುರೇಶ್ ಕುಮಾರ್ ಅಪಘಾತದಲ್ಲಿ ನಿಧನರಾಗಿದ್ದಾರೆ.